ರಾಷ್ಟ್ರೀಯ

ಡಾ. ಕಲಾಂರ ಚಿಂತನೆಗಳನ್ನು ಜೀವಂತವಾಗಿಡುವ ಉದ್ದೇಶ; ಆಕ್ಟಿವ್ ಆಗಿ ಇರಲಿದೆ ಟ್ವಿಟರ್ ಅಕೌಂಟ್

Pinterest LinkedIn Tumblr

abdulKalam_Twitter

ಹೊಸದಿಲ್ಲಿ: ಡಾ. ಕಲಾಂ ದೈಹಿಕವಾಗಿ ಎಲ್ಲರನ್ನೂ ಅಗಲಿರಬಹುದು. ಆದರೆ, ಅವರ ಚಿಂತನೆಗಳು ಮತ್ತು ದೂರದೃಷ್ಟಿಕೋನಗಳಿಗೆ ಯಾವತ್ತೂ ಸಾವಿರುವುದಿಲ್ಲ. ಎಲ್ಲರನ್ನೂ ಪ್ರೇರೇಪಿಸುವ ಪಾಠಗಳೊಂದಿಗೆ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿಯೂ ಕಲಾಂ ಅಕೌಂಟ್ ಜೀವಂತವಾಗಿರಲಿದೆ.

‘ಹೊಸ ರೂಪದೊಂದಿಗೆ, ‘ಇನ್ ಮೆಮೋರಿ ಆಫ್ ಡಾ.ಕಲಾಂ’ ಎಂಬ ಹೆಸರಿನಲ್ಲಿ ಡಾ.ಕಲಾಂ ಅವರ ಟ್ವೀಟರ್ ಅಕೌಂಟ್ ಜಾರಿಯಲ್ಲಿರುತ್ತದೆ,’ ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.

‘ಡಾ.ಕಲಾಂ ಅವರ ಅಮರ ನೆನಪುಗಳಿಗೆ ಅರ್ಪಿಸುತ್ತಾ, ಕಲಾಂ ಅವರ ಚಿಂತನೆಗಳು, ಅವರ ಪಾಠ ಮತ್ತು ದೃಷ್ಟಕೋನಗಳನ್ನು ಈ ಅಧಿಕೃತ ಅಕೌಂಟ್ ಪ್ರತಿಫಲಿಸಲಿದೆ,’ ಎಂದು ಕಲಾಂ ಆಪ್ತ ಸಹಾಯಕ ಸೃಜನ್ ಪಾಲ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಸಿಂಗ್ ಕಲಾಂ ಟ್ವೀಟರ್ ಅಕೌಂಟ್‌ನ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಕಲಾಂ ಅವರು ನೀಡಿದ ಅಸಂಖ್ಯ ಭಾಷಣಗಳು ಹಾಗೂ ‘ವಿಂಗ್ಸ್ ಆಫ್ ಫೈರ್,’ ‘ಇಂಡಿಯಾ 2020’, ‘ಇಗ್ನೈಟೆಡ್ ಮೈಂಡ್’ ಮುಂತಾದ ಪುಸ್ತಕಗಳಿಂದ ಆಯ್ದ ಸ್ಫೂರ್ತಿದಾಯಕ ಹೇಳಿಕೆಗಳನ್ನು ಈ ಟ್ವೀಟರ್ ಅಕೌಂಟ್‌ನಲ್ಲಿ ಹಾಕಲಾಗುತ್ತದೆ.

ಸಿಂಗ್ ಅವರೊಂದಿಗೆ ಕಲಾಂ ಬರೆದ ಪುಸ್ತಕ ‘ಅಡ್ವಾಂಟೇಜ್ ಇಂಡಿಯಾ’ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ.

2011ರಿಂದಲೂ ಕಲಾಂ ಟ್ವೀಟರ್ ಪುಟದಲ್ಲಿ ತಮ್ಮ ಚಿಂತನೆಗಳನ್ನು ಮತ್ತು ಪ್ರಸಕ್ತ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ನಿರಂತರವಾಗಿ ಪೋಸ್ಟ್‌ ಮಾಡುತ್ತಿದ್ದರು. ಸುಮಾರು 14 ಲಕ್ಷ ಫಾಲೋಯರ್ಸ್ ಹೊಂದಿದ್ದ ಕಲಾಂ ಟ್ವೀಟ್ ಪುಟ ಈಗ ಒಂದು ಲೈನ್ ಕೋಟ್‌ಗಳಿಂದ ತುಂಬಿ ಹೋಗಿದೆ. ಕಳೆದ ರಾತ್ರಿಯಿಂದಲೂ ‘ಕಲಾಂ ಸರ್’ ಎಂಬ ಹ್ಯಾಷ್‌ಟ್ಯಾಗ್ ಟ್ವೀಟರ್‌ನಲ್ಲಿ ಟ್ರೆಂಡ್ ಆಗಿದೆ.

Write A Comment