ರಾಷ್ಟ್ರೀಯ

ಡಾ.ಕಲಾಂರ ಮನೆಯಲ್ಲಿ ಟಿವಿಯೇ ಇರಲಿಲ್ಲ..!

Pinterest LinkedIn Tumblr

APJ-kalam

ಹೊಸದಿಲ್ಲಿ: ದಿವಂಗತ ಡಾ.ಕಲಾಂ ಅವರ ಪ್ರತಿಯೊಂದೂ ನಡೆಯೂ ಅನುಕರಣೀಯವೇ. ಎಲ್ಲ ವಯಸ್ಸಿನವರಿಗೂ ಅವರು ಮಾದರಿಯಾಗಿದ್ದರು. ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿಪರೀತ ಜ್ಞಾನ ಹೊಂದಿರುತ್ತಿದ್ದ ಕಲಾಂ ಅವರ ಮನೆಯಲ್ಲಿ ಟಿವಿಯೇ ಇರಲಿಲ್ಲ ಎಂದರೆ ನೀವು ನಂಬಲೇಬೇಕು.

ಕಳೆದ 24 ವರ್ಷಗಳಿಂದಲೂ ಕಲಾಂ ಅವರ ಒಡನಾಡಿ, ಆಪ್ತ ಕಾರ್ಯದರ್ಶಿಯಾಗಿದ್ದ ಹ್ಯಾರ್ರಿ ಶೆರಿಡಾನ್ ಅವರು ಕಲಾಂ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಸ್ಮರಿಸಿದ್ದಾರೆ.

‘ಸಾಮಾನ್ಯವಾಗಿ ಬೆಳಗ್ಗೆ 6.30- 7 ಗಂಟೆ ನಡುವೆ ತಮ್ಮ ದಿನವನ್ನು ಆರಂಭಿಸುತ್ತಿದ್ದ ಕಲಾಂ, ಆಕಾಶವಾಣಿ ಸುದ್ದಿ ಕೇಳುತ್ತಿದ್ದರು. ವೈಯಕ್ತಿಕ ಅಕೌಂಟ್‌ನ ಇ-ಮೇಲ್‌‌ಗಳನ್ನು ತಪ್ಪದೇ ನೋಡುತ್ತಿದ್ದರು. 2 ಗಂಟೆ ತಡರಾತ್ರಿವರೆಗೂ ಎಚ್ಚರವಿರುತ್ತಿದ್ದರು. ಪ್ರತಿ ವಾರವೂ ಅವರಿಗೆ ಕಾರ್ಯಾಗಾರಗಳಲ್ಲಿ ಭಾಗವಹಿಸಲು ಆಹ್ವಾನ ಇರುತ್ತಿತ್ತು. ವೈದ್ಯರು ಅವರನ್ನು ದಿನಾಲೂ ಭೇಟಿಯಾಗುತ್ತಿದ್ದರೂ, ಯಾವುದೇ ಆರೋಗ್ಯ ಸಮಸ್ಯೆ ಹೇಳಿರಲಿಲ್ಲ.’ ಎಂದು ಶೆರಿಡಾನ್ ಹೇಳಿದ್ದಾರೆ.

‘ಕಲಾಂ ಸರ್ ತುಂಬಾ ಒಳ್ಳೆಯ ಮನುಷ್ಯ. ಅಂಥ ಅನೇಕ ನಾಯಕರು ದೇಶಕ್ಕೆ ಅತ್ಯಗತ್ಯ,’ ಎಂದು ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Write A Comment