ಮನೋರಂಜನೆ

ಬಾಲಿವುಡ್ ನಟಿ ಅಫೇರ್ ಗೆ ಅಸಮಾಧಾನಗೊಂಡಿದ್ದಾರಂತೆ ಆಕೆಯ ತಾಯಿ

Pinterest LinkedIn Tumblr

483617Bipasha-Basu-Karan-Singh-Grover

ಬಾಲಿವುಡ್ ನ ಕೃಷ್ಣಾ ಸುಂದರಿ ಬಿಪಾಷಾ ಬಸು ತಮ್ಮ ರೋಮ್ಯಾನ್ಸ್ ಗಳ ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುವ ನಟಿ. ಜಾನ್ ಅಬ್ರಹಾಂ ಜೊತೆಗಿನ ಲಿವ್ ಇನ್ ರಿಲೇಶನ್ ಶಿಪ್ ಮುರಿದು ಬಿದ್ದ ಬಳಿಕ ತಡ ಮಾಡದೇ ಮತ್ತೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಬಿಪಾಷಾ ತಾಯಿ ಅಪಸ್ವರ ಎತ್ತಿದ್ದಾರೆಂಬುದು ಲೇಟೆಸ್ಟ್ ಸುದ್ದಿ.

ಬಿಪಾಷಾ ಬಸು ‘ಅಲೋನ್’ ಚಿತ್ರದಲ್ಲಿ ತಮ್ಮೊಂದಿಗೆ ನಟಿಸಿದ್ದ ಕರಣ್ ಸಿಂಗ್ ಗ್ರೋವರ್ ಜೊತೆ ಈಗ ಅಫೇರ್ ಹೊಂದಿದ್ದಾರೆ. ಆದರೆ ಕರಣ್ ಸಿಂಗ್ ಗ್ರೋವರ್ ಕುರಿತು ಸದಾಭಿಪ್ರಾಯ ಹೊಂದಿಲ್ಲದ ಬಿಪಾಷಾ ತಾಯಿ ಇದಕ್ಕಾಗಿ ಅಸಮಾಧಾನಗೊಂಡಿದ್ದಾರೆನ್ನಲಾಗಿದೆ. ಬಾಲಿವುಡ್ ನಲ್ಲಿ ಕರಣ್ ಸಿಂಗ್ ಗ್ರೋವರ್ ಪ್ಲೇ ಬಾಯ್ ಇಮೇಜ್ ಹೊಂದಿರುವುದೇ ಇದಕ್ಕೆ ಕಾರಣ. ಈಗಾಗಲೇ ಇಬ್ಬರಿಗೆ ಸೋಡಾ ಚೀಟಿ ಕೊಟ್ಟಿರುವ ಕರಣ್ ಸಿಂಗ್, ಈಗ ಬಿಪಾಷಾ ಜೊತೆ ಕಾಲ ಕಳೆಯುತ್ತಿದ್ದಾರೆ.

ತನ್ನ ತಾಯಿಯ ವಿರೋಧಕ್ಕೆ ಕ್ಯಾರೇ ಎನ್ನದ ಬಿಪಾಷಾ, ತಾನು ಕರಣ್ ಸಿಂಗ್ ಜೊತೆ ಅತ್ಮೀಯವಾಗಿರುವ ಕುರಿತು ಖುಲ್ಲಾಂಖುಲ್ಲಾ ಘೋಷಿಸಿದ್ದಾರೆ. ನಾವಿಬ್ಬರು ಸಮಾನಮನಸ್ಕರು ಎಂದು ಹೇಳಿಕೊಂಡಿರುವ ಬಿಪಾಷಾ ಬಸು, ಹಲವು ಪಾರ್ಟಿಗಳಿಗೆ ತಾವಿಬ್ಬರು ಜೊತೆಯಾಗಿ ಹೋಗಿದ್ದರೂ ಸದ್ಯ ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬಿದ್ದಿಲ್ಲವೆಂದು ನಗೆಯಾಡಿದ್ದಾರೆ.

Write A Comment