ಮನೋರಂಜನೆ

ಸಾನಿಯಾಗೆ ಖೇಲ್​ರತ್ನ ಶಿಫಾರಸು ?

Pinterest LinkedIn Tumblr

Sania-Mirza

ವೃತ್ತಿಜೀವನದ ಚೊಚ್ಚಲ ಮಹಿಳಾ ಡಬಲ್ಸ್ ಗೆದ್ದ ಸಂಭ್ರಮದಲ್ಲಿರುವ ವಿಶ್ವ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾರನ್ನು ದೇಶದ ಪ್ರತಿಷ್ಠಿತ ಕ್ರೀಡಾ ಪುರಸ್ಕಾರ ‘ಖೇಲ್​ರತ್ನ’ ಕ್ಕೆ ಕ್ರೀಡಾ ಸಚಿವಾಲಯ ಶಿಫಾರಸು ಮಾಡುವ ಸಾಧ್ಯತೆ ಇದೆ.

ನವದೆಹಲಿ: ವೃತ್ತಿಜೀವನದ ಚೊಚ್ಚಲ ಮಹಿಳಾ ಡಬಲ್ಸ್ ಗೆದ್ದ ಸಂಭ್ರಮದಲ್ಲಿರುವ ವಿಶ್ವ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾರನ್ನು ದೇಶದ ಪ್ರತಿಷ್ಠಿತ ಕ್ರೀಡಾ ಪುರಸ್ಕಾರ ‘ಖೇಲ್​ರತ್ನ’ ಕ್ಕೆ ಕ್ರೀಡಾ ಸಚಿವಾಲಯ ಶಿಫಾರಸು ಮಾಡುವ ಸಾಧ್ಯತೆ ಇದೆ.

28 ವರ್ಷದ ಆಟಗಾರ್ತಿ ಕಳೆದ ಒಂದು ವರ್ಷದ ಅವಧಿಯಲ್ಲಿ ಇಂಚೋನ್ ಏಷ್ಯನ್ ಗೇಮ್ಸ್​ನ ಮಿಶ್ರ ಡಬಲ್ಸ್

ನಲ್ಲಿ ಸ್ವರ್ಣ, ಮಹಿಳಾ ಡಬಲ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅದರೊಂದಿಗೆ 2014ರ ಯುಎಸ್ ಓಪನ್ ಗ್ರಾಂಡ್ ಸ್ಲಾಂನ ಮಿಶ್ರ ಡಬಲ್ಸ್​ನಲ್ಲಿ ಚಾಂಪಿಯನ್ ಆಗಿದ್ದರು. ಇತ್ತೀಚಿಗೆ ಮುಗಿದ ವಿಂಬಲ್ಡನ್ ಟೂರ್ನಿಯ ಮಹಿಳಾ ಡಬಲ್ಸ್​ನಲ್ಲಿ ಮಾರ್ಟಿನಾ ಹಿಂಗಿಸ್ ಜತೆಗೂಡಿ ಚಾಂಪಿಯನ್ ಆಗುವ ಮೂಲಕ ಖೇಲ್​ರತ್ನ ಪ್ರಶಸ್ತಿ ರೇಸ್​ನಲ್ಲಿ ಸಾನಿಯಾ ಮುಂಚೂಣಿಯಲ್ಲಿ ನಿಂತಿದ್ದಾರೆ.

ಸಾನಿಯಾ ಅರ್ಜಿ ಸಲ್ಲಿಸಿಲ್ಲ: 2004ರಲ್ಲಿ ಅರ್ಜುನ ಪುರಸ್ಕಾರ ಹಾಗೂ 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಸಾನಿಯಾ ಮಿರ್ಜಾ ಖೇಲ್​ರತ್ನ ಪ್ರಶಸ್ತಿಗೆ ಅರ್ಜಿ ಹಾಕಿಲ್ಲ. ಹಾಗಿದ್ದರೂ ಕ್ರೀಡಾ ಸಚಿವಾಲಯ ಅರ್ಹ ಅಥ್ಲೀಟ್​ಗಳನ್ನು ಶಿಫಾರಸು ಮಾಡುವ ಅಧಿಕಾರ ಹೊಂದಿದೆ. ‘ನಿಯಮಗಳ ಪ್ರಕಾರ ಸಾನಿಯಾ ಮಿರ್ಜಾ ಪ್ರಶಸ್ತಿಗೆ ಅರ್ಜಿ ಹಾಕಿಲ್ಲ. ಆದರೆ, ಈ ಪ್ರಶಸ್ತಿಗೆ ಅಥ್ಲೀಟ್ ಅರ್ಹ ಎಂದೆನಿಸಿದಲ್ಲಿ ಅವರು ಅರ್ಜಿ ಹಾಕದೇ ಇದ್ದರೂ ಶಿಫಾರಸು ಮಾಡುವ ಅಧಿಕಾರ ಸಚಿವಾಲಯಕ್ಕೆ ಇದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ, ಸಚಿವಾಯಲದ ಕಾರ್ಯದರ್ಶಿ ಅಜಿತ್ ಶರಣ್ ಈ ಕುರಿತಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

***

ವಿಶ್ವ ನಂ.1 ಆಟಗಾರ್ತಿ..

ಪ್ರತಿ ವರ್ಷದ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾಪ್ರಶಸ್ತಿಗಳನ್ನು ಪುರಸ್ಕಾರ ಮಾಡಲಾಗುತ್ತದೆ. ಕಳೆದ ವರ್ಷದ ಆಗಸ್ಟ್​ನಿಂದ ಈವರೆಗೂ ಸಾನಿಯಾಭಿನ್ನ ಜತೆಗಾರ್ತಿಯರೊಂದಿಗೆ 7 ಟೂರ್ನಿಗಳಲ್ಲಿ ಚಾಂಪಿಯನ್ ಹಾಗೂ 3 ಟೂರ್ನಿಗಳಲ್ಲಿ ರನ್ನರ್​ಅಪ್ ಆಗಿದ್ದಾರೆ. ಡಬ್ಲ್ಯು ಟಿಎ ಫೈನಲ್ಸ್​ನಲ್ಲಿ ಕಾರಾ ಬ್ಲ್ಯಾಕ್​ರೊಂದಿಗೆ ಪ್ರಶಸ್ತಿ ಅಲ್ಲದೆ, ಡಬಲ್ಸ್ ರ್ಯಾಂಕಿಂಗ್​ನಲ್ಲಿ ಈ ವರ್ಷ ವಿಶ್ವ ನಂ.1 ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ.

***

ಸಾನಿಯಾ ಫೇವರಿಟ್

ಖೇಲ್​ರತ್ನ ಪ್ರಶಸ್ತಿಗೆ ಸಾನಿಯಾ ಮಿರ್ಜಾ ಫೇವರಿಟ್. ಸಾನಿಯಾಗೆ ಸ್ಪರ್ಧೆ ನೀಡಬಲ್ಲ ಅಥ್ಲೀಟ್ ಎಂದರೆ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್. ಏಷ್ಯನ್ ಗೇಮ್ಸ್​ನಲ್ಲಿ ತಂಡವನ್ನು ಚಾಂಪಿಯನ್​ನತ್ತ ಮುನ್ನಡೆಸುವುದರೊಂದಿಗೆ ಒಲಿಂಪಿಕ್ಸ್ ಅರ್ಹತೆ ಗಳಿಸುವಂತೆ ಮಾಡಿದ್ದು ಅವರ ಸಾಧನೆ. ದೀಪಿಕಾ ಪಲ್ಲಿಕಲ್ ಏಷ್ಯನ್ ಗೇಮ್್ಸ ಸ್ವರ್ಣ ಹಾಗೂ ಕೆನಡ ಓಪನ್ ಜಯಿಸಿದ್ದರೆ, ಡಿಸ್ಕಸ್ ಥ್ರೋ ಅಥ್ಲೀಟ್ ಸೀಮಾ ಅಂಟಿಲ್ ಏಷ್ಯನ್ ಗೇಮ್್ಸ ಸ್ವರ್ಣ ಜಯಿಸಿದ್ದೇ ಮುಖ್ಯ ಸಾಧನೆ. ಕರ್ನಾಟಕದ ವಿಕಾಸ್ ಗೌಡ ಏಷ್ಯನ್ ಗೇಮ್್ಸ ನಲ್ಲಿ ಬೆಳ್ಳಿ ಹಾಗೂ ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಜಯಿಸಿದ್ದಾರೆ. ಇವರಲ್ಲದೆ, ಟಿಂಟು ಲೂಕಾ, ಎಚ್​ಎನ್ ಗಿರೀಶ್, ಪಿವಿ ಸಿಂಧು ಹಾಗೂ ಜೀವ್ ಮಿಲ್ಖಾ ಸಿಂಗ್ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ.

Write A Comment