ಮನೋರಂಜನೆ

ವಿವಾಹ ದಿನದಂದು ಶಾಹಿದ್ ಮೊಗದಲ್ಲಿ ಸಂತಸ ಕಂಡೆ: ಕರೀನಾ ಕಪೂರ್

Pinterest LinkedIn Tumblr

kaoorಬಾಲಿವುಡ್ ನಟ ಶಾಹಿದ್ ಕಪೂರ್ ವಿವಾಹದ ಬಗ್ಗೆ ಕರೀನಾ ಕಪೂರ್ ಪ್ರತಿಕ್ರಿಯಿಸಿದ್ದು, ವಿವಾದ ಸಂದರ್ಭದಲ್ಲಿ ತನ್ನ ಮಾಜಿ ಗೆಳೆಯ ಶಾಹಿದ್ ಕಪೂರ್ ಮೊಗದಲ್ಲಿ ಸಂತಸ ಕಂಡಿರುವುದಾಗಿ ಹೇಳಿದ್ದಾರೆ.

ಶಾಹಿದ್ ಕಪೂರ್ ವಿವಾಹ ಸಮಾರಂಭದಲ್ಲಿ ಕರೀನಾ ಕಪೂರ್ ಭಾಗಿಯಾಗಿರಲಿಲ್ಲವಾದರೂ, ತಾನು ಶಾಹಿದ್ ಕಪೂರ್ ಸಂತಸದಿಂದಿರುವುದನ್ನು ಕಂಡೆ, ಉತ್ತಮ ಸಾಧನೆ ಮಾಡಿರುವ ಶಾಹಿದ್ ಕಪೂರ್, ತನ್ನ ವೃತ್ತಿಜೀವನದ ಬಗ್ಗೆ  ತೃಪ್ತಿ ಹೊಂದಿದ್ದಾರೆ, ವಿವಾಹವಾಗಲು ಇದು ಆತನಿಗೆ ಸೂಕ್ತ ಸಮಯವಾಗಿತ್ತು ಎಂದು ಕರೀನಾ ಕಪೂರ್ ಹೇಳಿದ್ದಾರೆ.

ಅದ್ಭುತ ವ್ಯಕ್ತಿತ್ವ ಹೊಂದಿರುವ ಶಾಹಿದ್ ಕಪೂರ್, ಒಳ್ಳೆಯ ಪತಿಯಾಗಿರಲಿದ್ದಾರೆ ಎಂದಿದ್ದಾರೆ ಕರೀನಾ. ಶಾಹಿದ್ ಕಪೂರ್ ವಿವಾಹವಾಗುವುದರ ಬಗ್ಗೆ ತನಗೆ ತಿಳಿದಿತ್ತು, ತಾನು ಮದುವೆಯಾಗುತ್ತಿರುವುದಾಗಿ ಶಾಹಿದ್ ಕಪೂರ್ ತಿಳಿಸಿದ್ದರು. ಇದರಿಂದ ನನಗೂ ಸಂತಸವಾಯಿತು ಎಂದು ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಶಾಹಿದ್ ಕಪೂರ್ ವಿವಾಹದಲ್ಲಿ ಪಾಲ್ಗೊಳ್ಳುವ ವಿಷಯವಾಗಿ ಪ್ರತಿಕ್ರಿಯಿಸಿದ್ದ, ಆಹ್ವಾನ ಬಂದರೆ ಹೋಗುವುದಾಗಿ ಹೇಳಿದ್ದರು. ಅದರಂತೆಯೇ ಇತ್ತೀಚೆಗೆ ನಡೆದ ಶಾಹಿದ್ ಕಪೂರ್ ವಿವಾಹ ಸಮಾರಂಭದಲ್ಲಿ ಕರೀನಾ ಕಪೂರ್ ಭಾಗವಹಿಸುವ ನಿರೀಕ್ಷೆ ಇತ್ತು. ಇದಕ್ಕೂ ಮುನ್ನ ಶಾಹಿದ್ ಕಪೂರ್ ಕರೀನಾ ಕಪೂರ್ ಪ್ರೇಮಾಂಕುರವಾಗಿ ವಿವಾಹವಾಗುತ್ತಾರೆ ಎಂಬ ವದಂತಿ ಇತ್ತು, ಆದರೆ 2007 ರಲ್ಲಿ ಇಬ್ಬರ ನಡುವಿನ ಸ್ನೇಹ ಹದಗೆಟ್ಟು ಬೇರೆಯಾಗಿದ್ದರು.

Write A Comment