ಮನೋರಂಜನೆ

ರವಿಚಂದ್ರನ್ ಜೋಡಿಯಾಗಿ `ಪರಮಶಿವ’ದಲ್ಲಿ ಅಭಿನಯಿಸಿದ್ದ ನಟಿ ಶರಣ್ಯಗೆ ಕಂಕಣ ಭಾಗ್ಯ

Pinterest LinkedIn Tumblr

saranyaಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡ ಮಲೆಯಾಳಿ ಕುಟ್ಟಿಗೆ ಈಗ ನಿಶ್ಚಿತಾರ್ಥ ಸಂಭ್ರಮ. ಸದ್ಯದಲ್ಲೇ ನಟಿ ಶರಣ್ಯ ಮದುವೆ ಚಪ್ಪರದಡಿ ನಗೆ ಬೀರಲಿದ್ದಾಳೆ.

ಬಹುಭಾಷಾ ನಟಿ ಮಲೆಯಾಳಂನ ಶರಣ್ಯ ಮೋಹನ್ ಇಷ್ಟರಲ್ಲೇ ಸಪ್ತಪದಿ ತುಳಿಯಲಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಅರವಿಂದ್ ಕೃಷ್ಣನ್ ಅವರನ್ನು ವಿವಾಹವಾಗಲಿದ್ದಾರೆ.  ಇತ್ತೀಚೆಗಷ್ಟೇ ಕೇರಳದ ಅವರ ಹುಟ್ಟೂರು ಅಲಪ್ಪುಳದಲ್ಲಿ ಇವರಿಬ್ಬರ ವಿವಾಹ ನಿಶ್ಚಿತಾಥ ನಡೆದಿದೆ.  ಶರಣ್ಯ ಹಾಗೂ ಅರವಿಂದ್ ಕೃಷ್ಣನ್ ಕುಟುಂಬದವರ ಜತೆಗೆ, ಕೆಲವೇ ಕೆಲವು ಸ್ನೇಹಿತರು, ಬಂಧುಗಳು, ಒಡನಾಡಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ಶರಣ್ಯ, ತಮ್ಮ ವಿವಾಹ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಸ್ಟೇಟಸ್ ಹಾಕಿದ್ದಾರೆ.

ಕೇರಳದಲ್ಲಿ ಇನ್ನೇನು ಕಾರ್ತಿಕ ಮಾಸ ಶುರುವಾಗಲಿದೆ. ಹೀಗಾಗಿ ವಿವಾಹ ನಿಶ್ಚಿತಾರ್ಥ ಅವಸರದಲ್ಲಿ ನಡೆದಿದೆ. ಎರಡೂ ಕಡೆಯ ಕುಟುಂಬದವರು, ಕೆಲವು ಸ್ನೇಹಿತರು ಮಾತ್ರ ಭಾಗವಹಿಸಿದ್ದರು ಎಂದು ಶರಣ್ಯ ಹೇಳಿಕೊಂಡಿದ್ದಾರೆ. ಶರಣ್ಯ ಕೈ ಹಿಡಿಯಲಿರುವ ಅರವಿಂದ್ ಅವರ ಹುಟ್ಟೂರು ತ್ರಿವೇಂದ್ರಂ. ವೃತ್ತಿಯಲ್ಲಿ ವೈದ್ಯ. ಎರಡೂ ಕುಟುಂಬದವರ ಒಪ್ಪಿಗೆಯಿಂದಲೇ ವಿವಾಹ ನಿಶ್ಚಿತಾರ್ಥ ನಡೆದಿದೆ. ಅಧಿಕೃತ ಮಾಹಿತಿ ಪ್ರಕಾರ ಸೆಪ್ಟೆಂಬರ್ 6ಕ್ಕೆ ವಿವಾಹ ಜರುಗಲಿದೆ.

`ಮದುವೆಯ ಸಾಂಪ್ರದಾಯಿಕ ಆಚರಣೆಯಲ್ಲಿ ನನಗೆ ನಂಬಿಕೆಯಿದೆ. ಆದರೆ, ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವ ಯಾವ ಆಲೋಚನೆಗಳೂ ಇಲ್ಲ. ಸರಳವಾಗಿ ಮದುವೆ ಜರುಗಲಿದ್ದು, ಎಂದಿನಂತೆ ಸಿನಿಮಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲ್ಯದಿಂದಲೇ ನೃತ್ಯ, ಹಾಡುಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶರಣ್ಯ, ಬಾಲನಟಿಯಾಗಿ ಮಲೆಯಾಳಂನ ಬೆಳ್ಳಿ ತೆರೆಯಲ್ಲಿ ಮಿಂಚಿದ್ದರು. ಆ ಮೂಲಕವೇ ಚಿತ್ರರಂಗಕ್ಕೆ ಕಾಲಿಟ್ಟು ತೆಲುಗು, ತಮಿಳು, ಕನ್ನಡ, ಮಲೆಯಾಳಂನ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ವಿಶೇಷವಾಗಿ ಹೋಮ್ಲಿ ಪಾತ್ರಗಳಿಗೆ ಶರಣ್ಯ ಬ್ರಾಂಡ್ ನಟಿ. ರವಿಚಂದ್ರನ್ ಜೋಡಿಯಾಗಿ `ಪರಮಶಿವ’ದಲ್ಲಿ ಅಭಿನಯಿಸುವ ಮೂಲಕ ಕನ್ನಡಕ್ಕೂ ಪರಿಚಿತವಾಗಿದ್ದಾರೆ. ಇದಕ್ಕೂ ಮುನ್ನ `ಈ ಭೂಮಿ ಆ ಭಾನು’ ಎನ್ನುವ ಚಿತ್ರದಲ್ಲೂ ಶರಣ್ಯ ನಾಯಕಿ. ಅತಿ ಕಡಿಮೆ ಅವಧಿಯಲ್ಲೇ ದಕ್ಷಿಣ ಭಾರತದ ಪ್ರಮುಖ ಮೂರು ಭಾಷೆಗಳಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ನಟಿ ಶರಣ್ಯ. ಅಲ್ಲದೆ ಹಿಂದಿಯಲ್ಲಿ `ಬಾದಲ್‍ಪುರ್ ಬಾಯ್ಸ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಕಿರುತೆರೆಯುಲ್ಲೂ ಕಾಣಿಸಿಕೊಂಡಿರುವ ಶರಣ್ಯಾ, ಮಲೆಯಾಳಂನಲ್ಲಿ ಬೇಡಿಕೆಯ ನಟಿ ಎಂಬುದರಲ್ಲಿ ಎರಡು ಮಾತಿಲ್ಲ.

ತಮಿಳಿನಲ್ಲಿ ಬಂದ `ಅಳಗಾರ್‍ಸಾಮಿಯಿನ್ ಕುಧಿರೈ’ ಚಿತ್ರದಲ್ಲಿ ಶರಣ್ ಮಾಡಿದ ಪಾತ್ರವನ್ನು ನೋಡಿದರೆ ಈಕೆಯನ್ನು ಮೆಚ್ಚಿಕೊಳ್ಳದವರು ಕಡಿಮೆ. ಇನ್ನು ಕನ್ನಡಕ್ಕೆ ರಿಮೇಕ್ ಆದ ತಮಿಳಿನ `ವೆನ್ನಿಲ ಕಬಡ್ಡಿ’ ಚಿತ್ರಕ್ಕೂ ಶರಣ್ಯ ನಾಯಕಿ. ಯಾವುದೇ ರೀತಿಯ ಪಾತ್ರಗಳನ್ನು ಅತ್ಯಂತ ಸುಲಭವಾಗಿ ನಿಭಾಯಿಸುವ ಈಕೆಯ ನಟನೆ ಸುಂದರ ಮತ್ತು ಸರಳ. ಸಾಮಾನ್ಯ ಪ್ರೇಕ್ಷಕರಿಗೆ ಹತ್ತಿರವಾಗುವ ಪ್ರತಿಭಾವಂತೆ ಈಕೆ. ಇನ್ನು ತಮಿಳಿನ `ಯಾರಡಿ ನೀ ಮೋಹಿನಿ’ ಚಿತ್ರಕ್ಕೆ ಫಿಲ್ಮ್ ಫೇರ್ ಸೇರಿದಂತೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ತಮಿಳಿನಲ್ಲಿ ವಿಜಯ್, ನಟಿ ಭಾವನಾ, ನಯನಾತಾರಾ ಮುಂತಾದವರಿಗೆ ಅತಿ ಹೆಚ್ಚು ತಂಗಿ ಪಾತ್ರಗಳನ್ನು ಮಾಡಿದ ಹೆಗ್ಗಳಿಗೆ ನಟಿ ಶರಣ್ಯ ಅವರದ್ದು.

Write A Comment