ಮನೋರಂಜನೆ

ಮೋದಿ ಮತ್ತು ಶರೀಫ್ ‘ಭಜರಂಗಿ ಭಾಯಿಜಾನ್’ ವೀಕ್ಷಣೆಗೆ ಸಲ್ಮಾನ್ ಮನವಿ

Pinterest LinkedIn Tumblr

Bajrangi-Bhaijaanಮುಂಬೈ: ಪಾಕಿಸ್ತಾನದಲ್ಲಿ ‘ಭಜರಂಗಿ ಭಾಯಿಜಾನ್’ ಬಿಡುಗಡೆಗೆ ಅನುವು ಮಾಡಿಕೊಟ್ಟಿರುವ ಪಾಕಿಸ್ತಾನಿ ಸೆನ್ಸಾರ್ ಮಂಡಳಿಗೆ ಧನ್ಯವಾದ ಸಮರ್ಪಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರಿಗೆ ಭಾರತ ಪಾಕಿಸ್ತಾನ ಸಂಬಂಧದ ಬಗೆಗಿನ ತಮ್ಮ ಸಿನೆಮಾ ನೋಡುವಂತೆ ಮನವಿ ಮಾಡಿದಾರೆ.

೪೯ ವರ್ಷದ ನಟ ಟ್ವಿಟ್ಟರ್ ನಲ್ಲಿ ಪಾಕಿಸ್ತಾನ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

“ಪಾಕಿಸ್ತಾನದ ಸೆನ್ಸಾರ್ ಮಂಡಳಿಯ ದೊಡ್ಡತನಕ್ಕೆ ಧನ್ಯವಾದಗಳು” ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದು, “ಭಾರತ ಮತ್ತು ಪಾಕಿಸ್ತಾನಿ ಮುಖಂಡರು ಭಜರಂಗಿ ಭಾಯಿಜಾನ್ ಸಿನೆಮಾ ನೋಡಿದರೆ ನಾವು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ ಏಕೆಂದರೆ ಮಕ್ಕಳ ಮೇಲಿನ ಪ್ರೀತಿ ಎಲ್ಲ ಗಡಿಗಳಿಗಿಂತಲೂ ದೊಡ್ಡದು @narendramodi #nawazsharif(sic)” ಎಂದು  ಕೂಡ ಟ್ವೀಟ್ ಮಾಡಿದ್ದಾರೆ.

ಕಬೀರ್ ಖಾನ್ ನಿರ್ದೇಶಿಸಿರುವ ‘ಭಜರಂಗಿ ಭಾಯಿಜಾನ್’ ನಲ್ಲಿ ಕರೀನಾ ಕಪೂರ್ ಮತ್ತು ನವಾಜುದ್ದೀನ್ ಸಿದ್ಧಿಕಿ ಕೂಡ ನಟಿಸಿದ್ದು ಕೆಲವು ಭಾಗಕ್ಕೆ ಕತ್ತರಿ ಹಾಕುವುದರೊಂದಿಗೆ ಪಾಕಿಸ್ತಾನದಲ್ಲಿ ಕೂಡ ಈ ಸಿನೆಮಾ ಶುಕ್ರವಾರ ಬಿಡುಗಡೆಯಾಗಲಿದೆ.

“ಈದ್ ಹಬ್ಬದ ಸಮಯಕ್ಕೆ ಭಜರಂಗಿ ಭಾಯಿಜಾನ್ ಬಿಡುಗಡೆಗೆ ಸಿ ಬಿ ಎಫ್ ಸಿ ಸಮ್ಮತಿ ನೀಡಿದೆ ಆದರೆ ಹಲವು ಕತ್ತರಿಗಳೊಂದಿಗೆ” ಎಂದು ಪಾಕಿಸ್ತಾನಿ ಸಿನೆಮಾ ಸೆನ್ಸಾರ್ ಮಂಡಲಿಯ ಮುಖ್ಯಸ್ಥ ಮೊಬಶೀರ್ ಹಸನ್ ತಿಳಿಸಿದ್ದಾರೆ.

ಹಿಂದು ಪುರುಷನೊಬ್ಬ ಪಾಕಿಸ್ತಾನಿ ಕಿವುಡ ಮತ್ತು ಮೂಕಿ ಯುವತಿಯನ್ನು ತನ್ನ ದೇಶವಾದ ಪಾಕಿಸ್ತಾನಕ್ಕೆ ಕರೆದೊಯ್ಯುವ ಕಥಾಹಂದರವನ್ನು ಈ ಸಿನೆಮಾ ಹೊಂದಿದೆ. ಭಾರತ ಪಾಕಿಸ್ತಾನ, ಅಮೇರಿಕಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಒಳಗೊಂಡಂತೆ ಒಟ್ಟು ೫೦ ದೇಶಗಳಲ್ಲಿ ೫೦೦೦ ತೆರೆಗಳ ಮೇಲೆ ಶುಕ್ರವಾರ ಸಿನೆಮಾ ಪ್ರದರ್ಶನ ನೀಡಲಿದೆ.

Write A Comment