ಮನೋರಂಜನೆ

ಬಾಹುಬಲಿ ಅಂತಾರಾಷ್ಟ್ರೀಯ ಆವೃತ್ತಿಗೆ ವಿನ್ಸೆಂಟ್‌ ಟಬೈಲನ್‌ ಎಡಿಟಿಂಗ್‌

Pinterest LinkedIn Tumblr

bahubali_leadಮುಂಬಯಿ: ಸೂಪರ್‌ ಹಿಟ್‌ ಬಾಹುಬಲಿ ಚಿತ್ರದ ಅಂತಾರಾಷ್ಟ್ರೀಯ ಆವೃತ್ತಿಗೆ ಹಾಲಿವುಡ್‌ನ ಖ್ಯಾತ ಎಡಿಟರ್‌ ವಿನ್ಸೆಂಟ್‌ ಟಬೈಲನ್‌ ಎಡಿಟಿಂಗ್‌ ಮಾಡಲಿದ್ದಾರೆ ಎಂದು ಚಿತ್ರದ ನಿರ್ಮಾಪಕರು ಖಚಿತಪಡಿಸಿದ್ದಾರೆ

ಇನ್ಕ್ರೆಡಿಬಲ್ ಹಲ್ಕ್ ಸಿನಿಮಾದ ಎಡಿಟರ್‌ ಆಗಿ ಖ್ಯಾತರಾಗಿರುವ ವಿನ್ಸೆಂಟ್ ಅವರು ಎಸ್.ಎಸ್. ರಾಜಮೌಳಿಯವರ ಬಹುಭಾಷಾ ಸಿನಿಮಾ ಕಾವ್ಯವಾದ “ಬಾಹುಬಲಿ: ದಿ ಬಿಗಿನಿಂಗ್” ಚಿತ್ರಕ್ಕೆ ಕತ್ತರಿ ಆಡಲಿಸಲಿದ್ದಾರೆ.

ಬಾಹುಬಲಿ ಚಿತ್ರ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕಾದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲಿನ ತೆಲುಗು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಟಿಕೆಟ್ ರೇಟು ದುಪ್ಪಟ್ಟಾಗಿದ್ದರೂ ತಲೆ ಕೆಡಿಸಿಕೊಳ್ಳದೇ ಸಿನಿಮಾ ನೋಡುತ್ತಿದ್ದಾರೆ.

ಜಗತ್ತಿನೆಲ್ಲೆಡೆ ಭಾರತೀಯರು ನೋಡಿ ಆನಂದಿಸಿರುವ ದೇಶದ ಅತಿ ಹೆಚ್ಚು ಬಜೆಟ್‌ನ ಸಿನಿಮಾವನ್ನು ಜಗತ್ತಿನ ಎಲ್ಲರಿಗೂ ಅರ್ಥವಾಗುವ ಹಾಗೆ ಇಂಗ್ಲಿಷ್‌ನಲ್ಲಿ ಹಾಲಿವುಡ್‌ ಮಾದರಿಯಲ್ಲಿ ಅಂತಾರಾಷ್ಟ್ರೀಯ ಆವೃತ್ತಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದರು.

ಈ ಹೊಣೆಯನ್ನು “ಟೇಕನ್ 2”, “ಕ್ಲಾಶ್ ಆಫ್ ದಿ ಟೈಟನ್ಸ್”, “ನೌ ಯು ಸಿ ಮೀ”, “ದಿ ಲೆಜೆಂಡ್‌ ಆಫ್‌ ಹರ್ಕ್ಯುಲಸ್ ” ಮುಂತಾದ ಸೂಪರ್‌ಹಿಟ್‌ ಹಾಲಿವುಡ್‌ ಸಿನಿಮಾಗಳಿಗೆ ಕತ್ತರಿಯಾಡಿಸಿ ಸುಂದರವಾಗಿಸಿರುವ ವಿನ್ಸೆಂಟ್‌, ಬಾಹುಬಲಿ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಒಗ್ಗಿಸಿಕೊಳ್ಳಲು ಸ್ವಲ್ಪ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದ್ದಾರೆ.

ಸದ್ಯ ಜಗತ್ತಿನಾದ್ಯಂತ ಭಾರತೀಯರನ್ನು ಗುರಿಯಾಗಿಸಿಕೊಂಡು ಆಯ್ದ ನಗರಗಳಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಿದ್ದೇವೆ. ಆಗಸ್ಟ್‌ ಅಂತ್ಯಕ್ಕೆ ಅಂತಾರಾಷ್ಟ್ರೀಯ ಆವೃತ್ತಿ ಸಿದ್ಧವಾಗಲಿದೆ ಎಂದು “ಬಾಹುಬಲಿ: ದಿ ಬಿಗಿನಿಂಗ್‌” ಸಿನಿಮಾ ನಿರ್ಮಾಪಕ ಶೋಬು ಯರ್ಲಗಡ್ಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಂದು ರಾಜ್ಯವನ್ನು ಆಳುವ ಇಬ್ಬರು ಸಹೋದರರ ನಡುವೆ ಘರ್ಷಣೆಯ ಕತೆಯನ್ನು ಹೊಂದಿರುವ ಬಾಹುಬಲಿ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ದಾಖಲೆಗಳನ್ನು ಸೃಷ್ಟಿಸುತ್ತಿದೆ.

ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಅಪ್ಪಳಿಸಿರುವ ಸುಮಾರು 250 ಕೋಟಿ ರೂ. ವೆಚ್ಚದ ಈ ಸಿನಿಮಾಗೆ ಭಾರತದ ಅತಿ ಹೆಚ್ಚು ಬಜೆಟ್‌ನ ಸಿನಿಮಾ ಎಂಬ ಹೆಗ್ಗಳಿಕೆ ಇದೆ. ಜಗತ್ತಿನೆಲ್ಲೆಡೆ ಸೇರಿ 4,000ಕ್ಕೂ ಅಧಿಕ ಚಿತ್ರಮಂದಿರದಲ್ಲಿ ತೆರೆ ಕಂಡಿದೆ.

Write A Comment