ಅಂತರಾಷ್ಟ್ರೀಯ

ಬಿದ್ದು ಕತ್ತು ಮೂಳೆ ಮುರಿದುಕೊಂಡ ಅಮೆರಿಕ ಮಾಜಿ ಅಧ್ಯಕ್ಷ ಹೆಚ್‌ಡಬ್ಲ್ಯು ಬುಷ್

Pinterest LinkedIn Tumblr

dablyu-bhush-54634875968098ವಾಷಿಂಗ್ಟನ್, ಜು.16-ಮಾಜಿ ಅಧ್ಯಕ್ಷ ಜಾರ್ಜ್ ಹೆಚ್‌ಡಬ್ಲ್ಯು ಬುಷ್ ಅವರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಅವರಿಗೆ ಕುತ್ತಿಗೆಯ ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ.
91 ವರ್ಷದ ಅಮೆರಿಕದ 41ನೆ ಅಧ್ಯಕ್ಷರಾಗಿದ್ದ ಬುಷ್ ಅವರನ್ನು

ಹೂಸ್ಟನ್‌ನಲ್ಲಿ ಆಸ್ಪತ್ರೆಗೆ ಸೇರಿಸಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಉಸಿರಾಟದ ತೊಂದರೆಯಿಂದ ಬುಷ್ ಆಸ್ಪತ್ರೆಗೆ ದಾಖಲಾಗಿದ್ದರು.  ಮಾಜಿ ಅಧ್ಯಕ್ಷರು ಚೆನ್ನಾಗಿದ್ದಾರೆ. ಕುತ್ತಿಗೆ ಮೂಳೆ ಮುರಿತಕ್ಕೆ ಕಟ್ಟು ಹಾಕಲಾಗಿದ್ದು ಇಂದು ಅಥವಾ ನಾಳೆ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗುವುದು ಎಂದು ಡಾ.ಮೆಕ್‌ಗ್ರೆತ್ ಹೇಳಿದ್ದಾರೆ.

Write A Comment