ಮನೋರಂಜನೆ

ಕಪಿಲ್ ಶರ್ಮಾ ಜಾಗಕ್ಕೆ ಕರಣ್: ವದಂತಿ ತಳ್ಳಿಹಾಕಿದ ಕರಣ್ ಜೋಹರ್

Pinterest LinkedIn Tumblr

Karan-Johar-and-kapil-sharmaಹಾಸ್ಯ ಕಾರ್ಯಕ್ರಮ ಎಂದೇ ಹೆಸರು ಮಾಡುತ್ತಿದ್ದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ನಿರೂಪಕ ಕಪಿಲ್ ಶರ್ಮಾ ಜಾಗಕ್ಕೆ ಇನ್ನುಮುಂದೆ ಕರಣ್ ಜೋಹರ್ ಬರಲಿದ್ದಾರೆ ಎಂಬ ವದಂತಿಯನ್ನು ಕರಣ್ ಜೋಹರ್ ಸೋಮವಾರ ತಳ್ಳಿಹಾಕಿದ್ದಾರೆ.

ಖಾಸಗಿ ವಾಹಿನಿಯೊಂದರ ಹೆಸರಾಂತ ಕಾರ್ಯಕ್ರಮ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ಪ್ರಮುಖ ನಟ ಹಾಗೂ ನಿರೂಪಕ ಕಪಿಲ್ ಶರ್ಮಾ ಅನಾರೋಗ್ಯ ಪೀಡಿತರಾದ ಕಾರಣ ಕಾರ್ಯಕ್ರಮವನ್ನು ಮುಂದುವರೆಸುತ್ತಿಲ್ಲ. ಹೀಗಾಗಿ ಅವರ ಜಾಗಕ್ಕೆ ನಿರ್ದೇಶಕ ಕರಣ್ ಜೋಹರ್ ಬರಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿತ್ತು.

ಹೀಗಾಗಿ ವದಂತಿ ಕುರಿತಂತೆ ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ಕರಣ್ ಜೋಹರ್ ಅವರು, ಈ ರೀತಿಯ ವದಂತಿ ಯಾವಾಗ, ಹೇಗೆ ಪ್ರಾರಂಭವಾಯಿತು ಎಂಬುದು ನನಗೆ ತಿಳಿದಿಲ್ಲ. ಇದು ಸತ್ಯಕ್ಕೆ ದೂರವಾಗಿದ್ದು, ಕಪಿಲ್ ಶರ್ಮಾ ಇಲ್ಲದಿದ್ದರೆ ಆ ಕಾರ್ಯಕ್ರಮಕ್ಕೆ ಕಳೆಯೇ ಇರುವುದಿಲ್ಲ. ಕಪಿಲ್ ಶರ್ಮಾ ಜಾಗಕ್ಕೆ ನಾನು ಹೋಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Write A Comment