ಮನೋರಂಜನೆ

ಬಸ್ ಮಿಸ್ ಮಾಡಿಕೊಂಡ ಸಚಿನ್ ಮಾಡಿದ್ದೇನು …?

Pinterest LinkedIn Tumblr

1761sachin2ವಿಂಬಲ್ಡನ್ ವೀಕ್ಷಿಸಲು ತೆರಳಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಕೊನೆಯ ಬಸ್ ತಪ್ಪಿ, ಟ್ಟಿಟ್ಟರ್‍ನಲ್ಲಿ ತಮ್ಮ ಹಿಂಬಾಲಕರಿಗೆ ಲಿಫ್ಟ್ ಕೇಳಿದ ಘಟನೆ ನಡೆದಿದೆ.

ಗ್ರೇಟ್ ಹ್ಯಾಸಲೇ ಆಕ್ಸಫರ್ಡ್‍ಶಯರ್‍ನಲ್ಲಿದ್ದ ಸಚಿನ್‍ಗೆ ಕೊನೆಯ ಬಸ್ ಮಿಸ್ ಆಗಿತ್ತು. ಈ ಸಮಯದಲ್ಲಿ  ಅಲ್ಲಿ ಬೇರೆ ಯಾವುದೇ ವಾಹನ ಸೌಕರ್ಯ ಇರಲಿಲ್ಲ. ಮಾತ್ರವಲ್ಲ ಯಾವುದೇ ವಾಹನಗಳ ಓಡಾಟವೂ ಕಡಿಮೆ ಇತ್ತು.  ಹೀಗಾಗಿ ಸಚಿನ್ ಇಲ್ಲಿ ಯಾರದರೂ ಲಿಫ್ಟ್ ಕೊಡಬಲ್ಲಿರಾ ಎಂದು ಟ್ವಿಟ್ಟರ್‍ನಲ್ಲಿ ಕೇಳಿಕೊಂಡಿದ್ದರು.

ಸಚಿನ್ ಈ ಟ್ವಿಟ್‍ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದೇವರಿಗೂ ಕೆಲವೊಮ್ಮೆ ಬಸ್ಸು ತಪ್ಪಿ ಹೋಗುವುದುಂಟು ಎಂದು ಒಬ್ಬರು ಟ್ವೀಟ್ ಮಾಡಿದರೆ, ನಿಮ್ಮನ್ನು ಬಿಟ್ಟು ಹೋದ ಬಸ್ ಚಾಲಕ ದುರದೃಷ್ಟಶಾಲಿ ಎಂದು ಟ್ವೀಟ್ ಮಾಡಿದ್ದಾರೆ.

Write A Comment