ಮನೋರಂಜನೆ

‘ಲಂಚದ ಆಮಿಷ’ ಒಡ್ಡಿದ ಮುಂಬಯಿ ಕ್ರಿಕೆಟಿಗ ಹಿಕೆನ್ ಶಾ ಅಮಾನತು

Pinterest LinkedIn Tumblr

Hiken-Shah

ಹೊಸದಿಲ್ಲಿ: ಐಪಿಎಲ್ ಪಂದ್ಯದ ವೇಳೆ ಸಹ ಆಟಗಾರನ್ನೊಬ್ಬನಿಗೆ ‘ಲಂಚದ ಆಮಿಷ’ ಒಡ್ಡಿದ ರಣಜಿ ಕ್ರಿಕೆಟಿಗ ಹಿಕೆನ್ ಶಾ ಅವರನ್ನು ಬಿಸಿಸಿಐ ಸೋಮವಾರ ಅಮಾನತುಗೊಳಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲು ಶಿಸ್ತು ಸಮಿತಿಗೆ ಸೂಚಿಸಿದೆ.

‘ಮುಂಬಯಿ ಕ್ರಿಕೆಟಿಗ ಹಿಕೆನ್, ಆಟಗಾರರ ಭ್ರಷ್ಟಚಾರ ವಿರೋಧಿ ನೀತಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಸಾಬೀತಾಗಿದೆ. ಈ ತಕ್ಷಣವೇ ಜಾರಿಯಾಗುವಂತೆ ಬಿಸಿಸಿಐ ಅವರನ್ನು ಅಮಾನತುಗೊಳಿಸಿದೆ.’ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಹೇಳಿದ್ದಾರೆ.

‘ಶಿಸ್ತು ಸಮಿತಿ ಸೂಕ್ತ ಆದೇಶ ನೀಡುವವರೆಗೂ ಹಿಕೆನ್ ಅವರನ್ನು ಬಿಸಿಸಿಐಗೆ ಸಂಬಂಧಪಟ್ಟ ಎಲ್ಲ ಪಂದ್ಯಗಳಿಂದಲೂ ಅಮಾನತುಗೊಳಿಸಲಾಗಿದೆ,’ ಎಂದು ಹೇಳಿದ್ದಾರೆ.

ಯಾವುದೇ ಐಪಿಎಲ್ ಟೀಂನಲ್ಲಿಯೂ ಇರದ 30 ವರ್ಷದ ಹಿಕೆನ್, ಮುಂಬಯಿ ಪರವಾಗಿ 37 ಪ್ರಥಮ ಶ್ರೇಣಿ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 42.35 ಸರಾಸರಿಯಲ್ಲಿ 2160 ರನ್ ಗಳಿಸಿದ್ದಾರೆ.

ಐಪಿಎಲ್‌ ಆಡುತ್ತಿದ್ದ, ಪ್ರಥಮ ಶ್ರೇಣಿ ಕ್ರಿಕೆಟ್‌ನ ಸಹ ಆಟಗಾರನೊಬ್ಬನಿಗೆ ಐಪಿಎಲ್ ಪಂದ್ಯದ ವೇಳೆ ಹಿಕೆನ್ ಲಂಚದ ಆಮಿಷ ಒಡ್ಡಿದ್ದ. ಆ ಆಟಗಾರ ತಕ್ಷಣವೇ ತನ್ನ ಟೀಂನ ಫ್ರಾಂಚೈಸಿಗೆ ಈ ವಿಷಯ ತಿಳಿಸಿದ್ದರು. ನಂತರ ಬಿಸಿಸಿಐನ ಭ್ರಷ್ಟಚಾರ ವಿರೋಧಿ ವಿಭಾಗಕ್ಕೆ ಮಾಹಿತಿ ನೀಡಲಾಗಿತ್ತು.

Write A Comment