ರಾಷ್ಟ್ರೀಯ

ಇಬ್ಬರ ಸಾವಿಗೆ ಕಾರಣವಾದ ಗುದ್ದೋಡು ಪ್ರಕರಣ: ವಿಸ್ಮಯ್‌ಗೆ 5 ವರ್ಷ ಸೆರೆ

Pinterest LinkedIn Tumblr

hit-run

ಅಹಮದಾಬಾದ್: 2013ರಲ್ಲಿ ಸಂಭವಿಸಿದ ಗುದ್ದೋಡು ಪ್ರಕರಣದಲ್ಲಿ ಇಬ್ಬರು ಯುವಕರ ಸಾವಿಗೆ ಕಾರಣನಾದ ವಿಸ್ಮಯ್ ಶಾಗೆ ಇಲ್ಲಿಯ ಸ್ಥಳೀಯ ನ್ಯಾಯಾಲಯ ಐದು ವರ್ಷಗಳ ಕಾಲ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ.ಎಂ.ಪಟೇಲ್ ಶಿಕ್ಷೆ ಘೋಷಿಸಿದ್ದು, ಮೃತ ಯುವಕರ ಕುಟುಂಬಕ್ಕೆ ತಲಾ 5 ಲಕ್ಷ ನೀಡುವಂತೆಯೂ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ನಗರದ ಜಡ್ಜಸ್ ಬಂಗ್ಲೋ ರಸ್ತೆಯಲ್ಲಿ 110 ಕಿ.ಮೀ.ವೇಗದಲ್ಲಿ ಬಿಎಂಡಬ್ಲ್ಯೂ ಕಾರು ಓಡಿಸುತ್ತಿದ್ದ ವಿಸ್ಮಯ್ ಶಾ, ಪ್ರೇಮ್‌ಚಂದ್ರ ನಗರದ ಸಮೀಪ ಮೋಟಾರ್ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದ್ದ. ಘಟನೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಶಿವಂ ದವೆ (25) ಮತ್ತು ಆತನ ಸ್ನೇಹಿತ ರಾಹುಲ್ ಪಟೇಲ್ (21) ಮೃತಪಟ್ಟಿದ್ದರು.

ಕೋರ್ಟ್‌ನಲ್ಲಿ ಮೃತರ ಪೋಷಕರು ಹಾಜರಿದ್ದು, ತೀರ್ಪು ಹೊರ ಬೀಳುತ್ತಿದ್ದಂತೆ ಅತ್ತು ಬಿಟ್ಟರು. ಶಿಕ್ಷೆಯ ಪ್ರಮಾಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಆದೇಶವನ್ನು ಹೈ ಕೋರ್ಟ್‌ನಲ್ಲಿ ಪ್ರಶ್ನಿಸಿ, ಮತ್ತಷ್ಟು ಕಠಿಣ ಸಜೆಗೆ ಆಗ್ರಹಿಸಲಾಗುವುದು ಎಂದರು.

Write A Comment