ಮನೋರಂಜನೆ

ಕಿವೀಸ್ ವಿರುದ್ಧ ಭಾರತ ಸರಣಿ ಜಯ

Pinterest LinkedIn Tumblr

cri

ಬೆಂಗಳೂರು, ಜು.9: ತಿರುಶ್ ಕಾಮಿನಿ ಅರ್ಧಶತಕದ ನೆರವಿನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಇಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಜಯ ಗಳಿಸಿದೆ.
ಈ ಗೆಲುವಿನೊಂದಿಗೆ ಭಾರತದ ತಂಡ 5 ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಿಂದ ಜಯಿಸಿದೆ.

ತಿರುಶ್ ಕಾಮಿನಿ ಔಟಾಗದೆ 62 ರನ್(93 ನಿ, 78ಎ, 13ಬೌ) ಗಳಿಸಿದರು. ದೀಪ್ತಿ ಶರ್ಮ ಔಟಾಗದೆ 44 ರನ್(84ನಿ, 78 ಎ, 8ಬೌ) ಗಳಿಸಿದರು. ಇವರು ಎರಡನೆ ವಿಕೆಟ್ ಜೊತೆಯಾಟದಲ್ಲಿ 119 ರನ್ ದಾಖಲಿಸಿದರು.

2.2 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 18 ರನ್ ಮಾಡಿದ್ದ ಭಾರತ ತಂಡ ಬಳಿಕ ಚೇತರಿಸಿಕೊಂಡಿತು. ಮಂಧಾನಾ 13 ರನ್ ಗಳಿಸಿ ಔಟಾದರು.

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡ 41 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟಾಯಿತು. ಭಾರತದ ಬೌಲರ್‌ಗಳಾದ ಜುಲನ್ ಗೋಸ್ವಾಮಿ(2-17), ರಾಜೇಶ್ವರಿ ಗಾಯಕ್‌ವಾಡ್(2-15), ದೀಪ್ತಿ ಶರ್ಮ(2-22), ಏಕ್ತಾ ಬಿಸ್ತ್(1-23) ಮತ್ತು ಎಚ್.ಕೌರ್(1-23) ದಾಳಿಗೆ ಸಿಲುಕಿ 156 ನಿಮಿಷಗಳಲ್ಲಿ ಬ್ಯಾಟಿಂಗ್‌ನ್ನು ಮುಗಿಸಿತು.

ನ್ಯೂಝಿಲೆಂಡ್‌ನ ನಾಯಕಿ ಸುಝೈ ಬೇಟ್ಸ್ 42 ರನ್( 124 ನಿ, 85ಎ, 2ಬೌ) ಮತ್ತು ಅನ್ನಾ ಪೀಟರ್ಸನ್ (22) ಹೊರತುಪಡಿಸಿ ತಂಡದ ಸಹ ಆಟಗಾರರಿಂದ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ನ್ಯೂಝಿಲೆಂಡ್ 5 ಓವರ್‌ಗಳಲ್ಲಿ 12 ರನ್ ಸೇರಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಬೇಟ್ಸ್ ಮತ್ತು ಡಿವೈನ್ ಮೂರನೆ ವಿಕೆಟ್‌ಗೆ 49 ರನ್‌ಗಳ ಕೊಡುಗೆ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಯತ್ನ ನಡೆಸಿದರು. ಒಂದು ಹಂತದಲ್ಲಿ 61 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ನ್ಯೂಝಿಲೆಂಡ್ ತಂಡ ಬಳಿಕ ಈ ಮೊತ್ತಕ್ಕೆ 57 ರನ್ ಜಮೆ ಮಾಡುವಷ್ಟರಲ್ಲಿ ಸರ್ವಪತನ ಕಂಡಿತು.

Write A Comment