ಮನೋರಂಜನೆ

ನೂರು ಕೋಟಿ ಬಜೆಟ್ ಚಿತ್ರಕ್ಕೆ ಕಿಚ್ಚ ಸುದೀಪ್ ನಾಯಕ …?

Pinterest LinkedIn Tumblr

20314sudeepಡಾ. ಸಿ ಆರ್ ಮನೋಹರ್ ನಿರ್ಮಿಸಲು ಸಿದ್ದರಾಗಿರುವ ಮೂರು ಭಾಷೆಯಲ್ಲಿ ನಿರ್ಮಾಣವಾಗಲಿರುವ ನೂರು ಕೋಟಿ ಬಜೆಟ್ ನ ಚಿತ್ರಕ್ಕೆ ಸುದೀಪ್ ನಾಯಕರಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು ಸುದೀಪ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಇನ್ನೂ ಹೆಸರಿಡದ ಈ ಚಿತ್ರವನ್ನು ಪ್ರೇಮ್ ನಿರ್ದೇಶನ ಮಾಡಲಿದ್ದು ಸುದೀಪ್ ಚಿತ್ರಕ್ಕೆ ನಿರ್ದೇಶಿಸುವ ಪ್ರೇಮ್ ಅವರ ಆಸೆಗೆ ಮನೋಹರ್ ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ನಿರ್ಮಾಪಕ  ಚಂದ್ರಶೇಖರ್  ನಿರ್ಮಾಣದಲ್ಲಿ ಸುದೀಪ್ ಅವರ ಚಿತ್ರ ನಿರ್ದೇಶಿಸುವ ಕನಸು ಕಂಡಿದ್ದ ಪ್ರೇಮ್ ಗೆ ಕಾಲ ಕೂಡಿ ಬರಲಿಲ್ಲ. ಆದರೆ ಚಂದ್ರಶೇಖರ್ ‘ರನ್ನ’ ಚಿತ್ರವನ್ನು ನಿರ್ಮಿಸಿ ಯಶಸ್ಸು ಗಳಿಸಿದರು.

ಆದರೆ ಇದೀಗ ನಿರ್ಮಾಪಕ ಮನೋಹರ್ ಅವರು ಬೃಹತ್ ಬಜೆಟ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದು ಮುಂದಿನ ವರ್ಷ ನಿರ್ಮಾಣವಾಗುವ ಈ ಚಿತ್ರಕ್ಕೆ ಸುದೀಪ್ ನಾಯಕರಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

Write A Comment