ಮನೋರಂಜನೆ

ತೂಕ ಇಳಿಸಿಕೊಂಡ ಮಿ.ಪರ್ಫೆಕ್ಟ್..!

Pinterest LinkedIn Tumblr

amith-kanಬಾಲಿವುಡ್‌ನ ಹಲವು ಖಾನ್‌ಗಳಲ್ಲಿ ಅಮೀರ್‌ಖಾನ್ ಅಂದ್ರೆ ಒಂದು ರೀತಿಯ ರಿಯಲ್ ನಟ. ಯಾವುದೇ ಸಿನಿಮಾದಲ್ಲಿ ಯಾವುದೇ ಪಾತ್ರ ಮಾಡಿದರೂ ಅದು ವಾಸ್ತವಕ್ಕೆ ಸಮೀಪದಲ್ಲಿರಬೇಕು ಎಂಬ ಈ ನಟನದು. ಅದು ಅಷ್ಟು ಅಥೆಂಟಿಕ್ ಆಗೋವರೆಗೂ ಅವನು ಬಿಡೋದೇ ಇಲ್ಲ. ಅದಕ್ಕೆ ಅವನನ್ನು ಬಿಟೌನ್ ಮಂದಿ ಮಿ.ಪರ್ಫೆಕ್ಟ್ ಅಂತ ಕರೆಯೋದು.

ಅಂದಹಾಗೆ ಈಗಿನ ಹೊಸ ವಿಷ್ಯ ಏನಪ್ಪಾ ಅಂದ್ರೆ ತನ್ನ ಹೊಸ ದಂಗಾಲ್ ಚಿತ್ರದಲ್ಲಿನ ಫೈಟಿಂಗ್‌ಗಾಗಿ ಮಿ.ಪರ್ಫೆಕ್ಟ್ ಅನ್ನಿಸಿಕೊಂಡಿರೋ ಅಮೀರ್‌ಖಾನ್, ಈಗಾಗಲೇ ತನ್ನ ದೇಹದ ಕೆಲವೊಂದಿಷ್ಟು ತೂಕ ಇಳಿಸಿಕೊಳ್ಳುವ ಕೆಲಸ ಆರಂಭಿಸಿದ್ದಾನಂತೆ. ತನ್ನ ಚಿತ್ರದ ಪಾತ್ರಗಳು ನೈಜವಾಗಿರಬೇಕು. ಅದಕ್ಕಾಗಿ ನಾನು ದಂಗಾಲ್‌ನಲ್ಲಿನ ಮಹಾವೀರ್ ಫೋಗಟ್ ಪಾತ್ರಕ್ಕಾಗಿ ನನ್ನ ದೇಹವನ್ನು ಸಿದ್ಧಗೊಳಿಸಿಕೊಳ್ಳಬೇಕಾಗಿದೆ.

ಅದಕ್ಕಾಗಿ ಈಗ ತೂಕ ಕಡಿಮೆ ಮಾಡಿಕೊಳ್ಳಲು ಆರಂಭಿಸಿದ್ದೇನೆ. ಅಂದಹಾಗೆ ಈಗಾಗಲೆ ಒಂದಿಷ್ಟು ತೂಕ ಇಳಿಸಿಕೊಳ್ಳಲು ಕಸರತ್ತು ನಡೆಸಿದ್ದಾನಂತೆ. ಅಖಾಡದಲ್ಲಿ ಕುಸ್ತಿ ದೃಶ್ಯ ಚಿತ್ರೀಕರಣವಾಗುತ್ತಿದೆಯಂತೆ. ಅದಕ್ಕೆ ನಾನು ಸಿದ್ಧನಾಗಬೇಕಲ್ಲ….. ಎನ್ನುತ್ತಾನೆ ಅಮೀರ್. ಇದನ್ನೆಲ್ಲ ಅವನ ನಿಕಟ ಮೂಲಗಳು ಖುದ್ದಾಗಿ ಹೇಳಿವೆ.

Write A Comment