ಮನೋರಂಜನೆ

ಹಾಲಿವುಡ್​ಗೆ ಹಾರಲಿದ್ದಾರೆ ಆಮಿರ್ ಖಾನ್ !

Pinterest LinkedIn Tumblr

Aamir-Khan

ಒಂದೆಡೆ ನಟ ಆಮಿರ್ ಖಾನ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳಲಿರುವ ‘ದಂಗಲ್’ ಚಿತ್ರದ ತಯಾರಿ ಭರ್ಜರಿಯಾಗಿ ಸಾಗುತ್ತಿದೆ. ಮತ್ತೊಂದೆಡೆ ಅವರ ಮುಂದಿನ ಚಿತ್ರದ ಮಾತುಕತೆಯೂ ನಡೆಯುತ್ತಿದೆ. ಮೂಲಗಳ ಪ್ರಕಾರ, ‘ದಂಗಲ್’ ನಂತರ ಆಮಿರ್ ಹಾಲಿವುಡ್​ಗೆ ಹಾರಲಿದ್ದಾರೆ!

2011ರಲ್ಲಿ ಹತ್ಯೆಗೊಳಗಾದ ಕ್ರೖೆಂ ಪತ್ರಕರ್ತ ಜ್ಯೋತಿರ್ವಯ್ ಡೇ (ಜೆ ಡೇ)ಜೀವನಾಧಾರಿತ ಚಿತ್ರ ‘ಮಿಡ್ ಡೇ’ನಲ್ಲಿ ಆಮಿರ್ ನಟಿಸುತ್ತಾರೆ ಎಂಬ ಮಾತು ಬಹುದಿನಗಳಿಂದ ಕೇಳಿಬರುತ್ತಲೇ ಇತ್ತು. ನಂದಿತಾ ಸಿಂಘಾ ನಿರ್ದೇಶಿಸಿ, ನಿರ್ವಿುಸಲಿರುವ ಈ ಬಯೋಪಿಕ್​ನ ಕೆಲಸಗಳಿಗೀಗ ಕೊಂಚ ವೇಗ ದೊರೆತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಚಿತ್ರ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ತಯಾರಾಗಲಿದೆ. ಹಾಗಾಗಿ, ಇದು ಆಮಿರ್ ಪಾಲಿನ ಮೊದಲ ಅಂತಾರಾಷ್ಟ್ರೀಯ ಚಿತ್ರ ಎನಿಸಿಕೊಳ್ಳಲಿದೆ. ಈಗಾಗಲೇ ಚಿತ್ರಕಥೆಗೆ ಮನಸೋತಿರುವ ಅವರು ನಂದಿತಾಗೆ ಡೇಟ್ಸ್ ಕೂಡ ನೀಡಿದ್ದಾರೆ.

ಜೆ ಡೇ ಹತ್ಯೆಯ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ ಪತ್ರಕರ್ತೆಯ ಪಾತ್ರಕ್ಕೂ ‘ಮಿಡ್ ಡೇ’ನಲ್ಲಿ ಸಾಕಷ್ಟು ಮಹತ್ವ ಇದೆಯಂತೆ. ಹಾಗಾಗಿ ಆ ಪಾತ್ರ ಯಾರು ನಿಭಾಯಿಸುತ್ತಾರೆ ಎಂಬುದು ಬಹುದಿನಗಳ ಪ್ರಶ್ನೆಯಾಗಿತ್ತು. ಅದಕ್ಕೂ ಈಗ ಉತ್ತರ ಸಿದ್ಧವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುತ್ತಿರುವ ಚಿತ್ರ ಇದಾಗಿರುವುದರಿಂದ ಅಂತಾರಾಷ್ಟ್ರೀಯ ಖ್ಯಾತಿಯ ನಟಿಯನ್ನೇ ಹಾಕಿಕೊಂಡರೆ ಒಳಿತು ಎಂಬ ಲೆಕ್ಕಾಚಾರದಲ್ಲಿದ್ದಾರೆ ನಂದಿತಾ. ‘ಹ್ಯಾರಿ ಪಾಟರ್’ ನಾಯಕಿ ಎಮ್ಮಾ ವಾಟ್ಸನ್ ಅವರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆಯಂತೆ. ‘ಇನ್ನೂ ಯಾವುದೂ ಅಂತಿಮವಾಗಿಲ್ಲ. ಎಮ್ಮಾ ಓಕೆ ಅನ್ನುತ್ತಿದ್ದಂತೆ ಮಾಧ್ಯಮಗೋಷ್ಠಿ ಕರೆದು ತಿಳಿಸುತ್ತೇನೆ’ ಎಂದಿದ್ದಾರೆ ನಂದಿತಾ.

ಒಂದುವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ, ಆಮಿರ್-ಎಮ್ಮಾ ಕಾಂಬಿನೇಷನ್​ನಿಂದಾಗಿ ‘ಮಿಡ್ ಡೇ’ ಜಾಗತಿಕ ಮಟ್ಟದ ಸ್ಟಾರ್ ಸಿನಿಮಾ ಎನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗಂತ ಇವರಿಬ್ಬರು ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ‘ಇವರಿಬ್ಬರ ಪಾತ್ರಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬಂದುಹೋಗುತ್ತವೆಯೇ ಹೊರತು ಒಟ್ಟಾಗಿ ಇರುವುದಿಲ್ಲ’ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

Write A Comment