ಮನೋರಂಜನೆ

ಬಾಲಿವುಡ್ ನಟ ಶಾಹೀದ್ ಕಪೂರ್ ವಿವಾಹ ಆಮಂತ್ರಣ ಪತ್ರಿಕೆ ಹೀಗಿದೆ ನೋಡಿ

Pinterest LinkedIn Tumblr

812articles100-1089ಬಾಲಿವುಡ್ ನಟ ಶಾಹೀದ್ ಕಪೂರ್ ದೆಹಲಿ ಮೂಲದ ಯುವತಿ ಮೀರಾ ರಜಪೂತ್ ಜೊತೆ ಇದೇ ತಿಂಗಳು ವಿವಾಹವಾಗಲಿದ್ದಾರೆ. ಇವರ ವಿವಾಹ ಆಮಂತ್ರಣ ಪತ್ರಿಕೆ ಹೇಗಿರಬಹುದೆಂಬ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ.

ಶಾಹೀದ್ ಕಪೂರ್ ಮತ್ತು ಮೀರಾ ಇಬ್ಬರೂ ಸೇರಿಯೇ ಈ ವಿವಾಹ ಆಮಂತ್ರಣ ಪತ್ರಿಕೆಯನ್ನು ಇಷ್ಟಪಟ್ಟು ಆಯ್ಕೆ ಮಾಡಿದ್ದಾರೆಂದು ಹೇಳಲಾಗಿದ್ದು, ಇದು ಇಬ್ಬರ ಕುಟುಂಬಸ್ಥರಿಗೂ ಒಪ್ಪಿಗೆಯಾಗಿದೆ. ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಬಾಲಿವುಡ್ ಗಣ್ಯರೂ ಸೇರಿದಂತೆ ಬಂಧು ಬಳಗಕ್ಕೆ ವಿತರಿಸಲಾಗಿದೆ.

ಜುಲೈ 7 ರಂದು ಗುರ್ಗಾಂವ್ ನ ಪಂಚತಾರಾ ಹೋಟೆಲಿನಲ್ಲಿ ವಿವಾಹದ ಬಳಿಕದ ಔತಣ ಕೂಟವನ್ನು ಏರ್ಪಡಿಸಲಾಗಿದ್ದು, ಆಮಂತ್ರಿತರು ಉಡುಗೊರೆ ತರಬಾರದೆಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಶಾಹೀದ್ ತಂದೆ ಪಂಕಜ್ ಕಪೂರ್ ಅವರೇ ಮಗನಿಗೆ ವಧು ಹುಡುಕಿದ್ದರೆಂದು ಹೇಳಲಾಗಿದ್ದು, ವಿವಾಹದ ಶಾಸ್ತ್ರಗಳು ಆಗ್ರಾದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

Write A Comment