ಅಂತರಾಷ್ಟ್ರೀಯ

ಸೌದಿ ರಾಜಕುಮಾರನಿಂದ 32 ಶತಕೋಟಿ ಡಾಲರ್ ಇಡೀ ಆಸ್ತಿಯ ದಾನ

Pinterest LinkedIn Tumblr

soರಿಯಾದ್: ಸೌದಿ ಅರೇಬಿಯಾದ ಬಿಲಿಯಾಧಿಪತಿ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಬುಧವಾರ ತಮ್ಮ ಇಡೀ 33 ಶತಕೋಟಿ ಡಾಲರ್( 28.8 ಶತಕೋಟಿ ಯೂರೊ) ಆಸ್ತಿಯನ್ನು ಮುಂಬರುವ ವರ್ಷಗಳಲ್ಲಿ ಧರ್ಮಾರ್ಥ ಯೋಜನೆಗಳಿಗೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಈ ಪರೋಪಕಾರದ ಪ್ರತಿಜ್ಞೆಯಿಂದ ಸಾಂಸ್ಕೃತಿಕ ತಿಳುವಳಿಕೆ, ಸಮುದಾಯಗಳ ಅಭಿವೃದ್ಧಿ ಮತ್ತು ಮಹಿಳೆಯರಿಗೆ ಮತ್ತು ಯುವಕರಿಗೆ ಅಧಿಕಾರ, ಮುಖ್ಯ ಹಾನಿ ಪರಿಹಾರ ಮತ್ತು ಹೆಚ್ಚು ಸಹನಶೀಲ ಮತ್ತು ಸ್ವೀಕಾರಾರ್ಹ ಜಗತ್ತಿನ ಸೃಷ್ಟಿಗೆ ನೆರವಾಗುತ್ತದೆ ಎಂದು ಹೇಳಿದ್ದಾರೆ.

ಮುಂಬರುವ ವರ್ಷಗಳಲ್ಲಿ ಉತ್ತಮ ಯೋಜನೆ ಮೂಲಕ ಕೊಡುಗೆಯನ್ನು ಹಂಚಲಾಗುತ್ತದೆ. ಆದರೆ ಈ ದೇಣಿಗೆಯನ್ನು ಯಾವಾಗ ಖರ್ಚು ಮಾಡಲಾಗುತ್ತದೆಂಬ ಬಗ್ಗೆ ಕಾಲಮಿತಿ ಇಲ್ಲ ಎಂದು ಹೇಳಿದ್ದಾರೆ.

ಈ ಹಣವನ್ನು ಖರ್ಚು ಮಾಡುವ ಬಗ್ಗೆ ಟ್ರಸ್ಟಿಗಳ ಮಂಡಳಿಗೆ ತಾವು ಮುಖ್ಯಸ್ಥರಾಗಿದ್ದು, ಮಾನವೀಯ ಯೋಜನೆಗಳಿಗೆ ಮತ್ತು ಉಪಕ್ರಮಗಳಿಗೆ ನನ್ನ ಸಾವಿನ ಬಳಿಕವೂ ಹಣವನ್ನು ಬಳಸಬಹುದು ಎಂದು ಹೇಳಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ತಮ್ಮ ಶಪಥವು ಬಿಲ್ ಮತ್ತು ಮೆಲಿಂಡಾ ಗೇಡ್ಸ್ ಪ್ರತಿಷ್ಠಾನದ ಮಾದರಿಯಲ್ಲಿರುತ್ತದೆ ಎಂದು ತಿಳಿಸಿದರು.

Write A Comment