ಮನೋರಂಜನೆ

ಮುಂದಿನ ಚಿತ್ರದಲ್ಲಿ ಮಾನಸಿಕ ಅಸ್ವಸ್ಥೆಯಾಗಿ ನಟಿಸಲಿರುವ ಕರೀನಾ

Pinterest LinkedIn Tumblr

kareeಸುದ್ದಿಯು ನಿಜವೇ ಆಗಿದ್ದಲ್ಲಿ ಕರೀನಾ ಕಪೂರ್ ಅವರ ಮುಂದಿನ ಚಿತ್ರದಲ್ಲಿನ ನಟನೆಯು ವಿಭಿನ್ನ ಪಾತ್ರದ ಮೂಲಕ ಹೊರ ಹೊಮ್ಮಲಿದೆ. ಅಂದರೆ ಕರೀನಾ ಅವರು ಮುಂದಿ ಚಿತ್ರದಲ್ಲಿ ಮಾನಸಿಕ ಅಸ್ವಸ್ಥ  ಯುವತಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸ್ಕಿಜೋಫ್ರೆನಿಕ್  ಹೆಸರಿನ ಸಮಸ್ಯೆ ಎದುರಿಸುತ್ತಿರುವ ಪಾತ್ರದಲ್ಲಿ ಅವರು ಕಂಡು ಬರಲಿದ್ದಾರೆ.

ಹೀರೋಯಿನ್ ಚಿತ್ರದ ನಾಯಕಿ ಕರೀನಾ ಅವರು ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. ಈರೋಸ್ ಇಂಟರ್ ನ್ಯಾಷನಲ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಜ್ ಕುಮಾರ್ ಗುಪ್ತ ಅವರ ನಿರ್ದೇಶನವಿದೆ.

ಇದು ಸೆಕ್ಷನ್ 84 ಆಫ್ ಇಂಡಿಯನ್ ಪೀನಲ್ ಕೋಡ್ ಮತ್ತು ನೈಜ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಪ್ರಸ್ತುತ ಕರೀನಾ ಕಪೂರ್-ಖಾನ್ ಅವರು ಸಲ್ಮಾನ್ ಖಾನ್ ಅವರ ಜೊತೆ ನಟಿಸಿರುವ ಭಜರಂಗಿ ಭಾಯ್ಜಾನ್ ಮತ್ತು  ಅಭಿಷೇಕ್ ಛುಬೆ ಅವರ  ಉಡ್ತಾ ಪಂಜಾಬ್  ಚಿತ್ರಗಳ  ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Write A Comment