ಮನೋರಂಜನೆ

ಗಣಪ ಚಿತ್ರದಲ್ಲಿ ಭೂಗತಲೋಕದ ವಿಭಿನ್ನ ಕಥೆ

Pinterest LinkedIn Tumblr

ganappa ಸ್ಯಾಂಡಲ್‌ವುಡ್‌ನಲ್ಲಿ ಭೂಗತಲೋಕದ ಕುರಿತು ಹಲವಾರು ರೌಡಿಸಂ ಹಿನ್ನೆಲೆಯಲ್ಲಿರುವ ನೂರಾರು ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣಗೊಂಡಿವೆ. ಆದರೆ ಅವೆಲ್ಲಕ್ಕಿಂತ ವಿಭಿನ್ನವಾದ, ವಿನೂತನ ಪ್ರಯೋಗವೊಂದನ್ನು ನಿರ್ದೇಶಕ ಪ್ರಭುಶ್ರೀನಿವಾಸ್ ಮಾಡಿದ್ದಾರೆ. ಆ ಚಿತ್ರದ ಹೆಸರು ಗಣಪ.

ಕರಿಯ ದಂಧೆ ಸೂಪರ್ ಹಿಟ್ ಚಿತ್ರವನ್ನು ಕನ್ನಡಿಗರಿಗೆ ನೀಡಿದ ನಿರ್ಮಾಪಕ ಆನೇಕಲ್ ಬಾಲರಾಜ ಅವರ ಪುತ್ರ ಸಂತೋಷ್ ಈ ಚಿತ್ರದ ನಾಯಕ. ಸಂತೋಷ್ ಈಗಾಗಲೇ ಕೆಂಪನಾಗಿ ಚಿತ್ರದ ರಸಿಕರಿಗೆ ಚಿರಪರಿಚಿತರಾಗಿದ್ದಾರೆ.  ಪಿ-2 ಪ್ರೊಡಕ್ಷನ್ಸ್ ಮೂಲಕ ಪರಮೇಶ ನಿರ್ಮಿಸಿರುವ ಈಚಿತ್ರದಲ್ಲಿ ಅಮಾಯಕ ಯುವಕನೊಬ್ಬ ಹೇಗೆ ಭೂಗತಲೋಕದ ಜಾಲದೊಳಗೆ ಸಿಲುಕಿ ಹಾಕಿಕೊಳ್ಳುತ್ತಾನೆ. ಪ್ರೇಮಿಗಳಿಬ್ಬರು ಅಂಡರ್‌ವರ್ಲ್ಡ್ ಜಾಲದಲ್ಲಿ ಸಿಲುಕಿ ಹೇಗೆ ಪರಿತಪಿಸುತ್ತಾರೆ. ಆ ಜಾಲದಿಂದ ಪ್ರೇಮಿಗಳು ಹೊರಬರಲು ಸಾಧ್ಯವಾಯಿತೇ, ಇಲ್ಲವೇ ಎನ್ನುವುದೇ ಗಣಪನ ಸಿಂಗಲ್‌ಲೈನ್ ಸ್ಟೋರಿ. ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

ಪಲ್ಲಕ್ಕಿ ಪಾರಿಜಾತ ನಂತರ ಪ್ರಭು-ಪರಮೇಶ ಜೋಡಿ ಪಕ್ಕಾಮಾಸ್ ಸಬ್ಜಕ್ಟ್‌ಗೆ ಕೈ ಹಾಕಿದೆ. ಹಿಂದಿನ ಎರಡೂ ಚಿತ್ರಗಳು ಲವ್, ಕಾಮಿಡಿ ಕಂಟೆಂಟ್ ಹೊಂದಿ ದ್ದವು. ಸಾಕಷ್ಟು ಟ್ವಿಸ್ಟ್ ಹಾಗೂ ಎಮೋಷನ್‌ಗಳಿರುವ ಈ ಚಿತ್ರಕ್ಕೆ ಆರೇಳು ತಿಂಗಳು ಕೂತು ಸ್ಕ್ರಿಪ್ಟ್ ಮಾಡಿಕೊಳ್ಳಲಾಗಿದ್ದು, ಸುಮಾರು 108 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಮಲೆನಾಡಿನ  ಬೆಡಗಿ ಪ್ರಿಯಾಂಕ ಗಣಪನ ಪ್ರೇಯಸಿಯಾಗಿ ನಟಿಸಿದ್ದಾರೆ. ಪ್ರೀತಿಯಿಂದ ಧಾರವಾಹಿಯಲ್ಲಿ ನಟಿಸಿದ್ದ ಈ ಚಲುವೆ ಮೊದಲ ಬಾರಿಗೆ ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಪರಮೇಶ್, ನನ್ನ ಹಾಗೂ ಪ್ರಭು ಅವರ 3ನೇ ಚಿತ್ರವಿದು, ಪಾರಿಜಾತ ಚಿತ್ರ ಸಮಯದಲ್ಲಿ ಪ್ರಭು ಈ ಕಥೆಯನ್ನು ಹೇಳಿದ್ದರು.

ತುಂಬಾ ಟ್ವಿಸ್ಟ್ ಗಳಿರುವಂಥ ಇಂಟ್ರೆಸ್ಟಿಂಗ್ ಸಬ್ಜೆಕ್ಟ್. ಸುಮಾರು 6-7 ತಿಂಗಳು ಕೂತು ಸ್ಕ್ರಿಪ್ಟ್ ಮಾಡಿದೆವು. ಹೊಸ ಮುಖವೊಂದು ಬೇಕಿತ್ತು, ಸಂತೋಷ್ ಆ ಪಾತ್ರಕ್ಕೆ ಸೂಕ್ತವೆನಿಸಿ ಅವರ ತಂದೆ ಜೊತೆ ಮಾತನಾಡಿದಾಗ ಅವರೂ ಒಪ್ಪಿದರು. ಕಥೆಗೆ ತಕ್ಕ ಹಾಗೆ ಸಂತೋಷ್‌ಗೆ ತರಬೇತಿ ನೀಡಿದೆವು ಅಲ್ಲದೆ ಚೆನ್ನೈನಲ್ಲಿ ಸ್ಪೆಷಲ್ ಟ್ರೈನಿಂಗ್ ಕೊಡಿಸಿದೆವು. ಚಿತ್ರದಲ್ಲಿ ಸಂತೋಷ್, ಪದ್ಮಜಾರಾವ್, ಪೆಟ್ರೋಲ್ ಪ್ರಸನ್ನ ಬಿಟ್ಟು ಉಳಿದೆಲ್ಲಾ ಹೊಸ ಮುಖಗಳೇ ಈ ಚಿತ್ರದಲ್ಲಿವೆ. ಬೆಂಗಳೂರು,ಚೆನ್ನೈ ಹತ್ತಿರದ ಕಾರಕೂಡು ಸೇರಿ ಹಲವಾರು ಸ್ಥಳಗಳಲ್ಲಿ ಶೂಟಿಂಗ್ ನಡೆಸಿದ್ದೇವೆ ಎಂದು ಹೇಳಿಕೊಂಡರು. ನಾಯಕ ಸಂತೋಷ್ ಮಾತನಾಡಿ, ಮಾರ್ಕೆಟ್‌ನಲ್ಲಿ ಬೆಳೆದಂಥ ಹುಡುಗನ ಪಾತ್ರ ತುಂಬಾ ರಗಫ್, ಲವ್, ಆಕ್ಷನ್ ಎಲ್ಲಾ ಇರುವಂಥ ಕಥೆ,

ಶೂಟಿಂಗ್ ಟೈಂನಲ್ಲಿ ಕಾಲಿಗೆ ಏಟು ಬಿದ್ದಿದ್ದರಿಂದ ತುಂಬಾ ತೊಂದರೆಯಾಗಿತ್ತು. ನಿರ್ದೇಶಕರಿಗೆ ಹೊಸಬರನ್ನು ಹೇಗೆ ತೋರಿಸಬೇಕೆಂಬುದು ಚೆನ್ನಾಗಿ ಗೊತ್ತು. ಈ ಚಿತ್ರ ಹೊಸ ಇಮೇಜ್ ತಂದುಕೊಡಲಿದೆ ಎಂಬುದಾಗಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ನಾಯಕಿ ಪ್ರಿಯಾಂಕ ಮೂಲತಃ ಭದ್ರಾವತಿಯವರು. ಪ್ರೀತಿಯಿಂದ ಸೀರಿಯಲ್ ಮೂಲಕ ಬಣ್ಣ ಹಚ್ಚಿದವರು. ಆಡಿಷನ್ ಮೂಲಕ ಈ ಚಿತ್ರಕ್ಕೆ ಸೆಲೆಕ್ಟ್ ಆದರಂತೆ. ಒಬ್ಬ ಸಾಮಾನ್ಯ ಹುಡುಗಿಯ ಪಾತ್ರ ನನ್ನದು. ಪಕ್ಕದ್ಮನೆ ಹುಡುಗಿ ಥರದ ಪಾತ್ರ. ನಾನು ಮನೆಯಲ್ಲಿ ಹೇಗಿರ್ತೇ ನೋ ಅದೇ ಥರ ಪಾತ್ರ ಇದ್ದಿದ್ದರಿಂದ ಅಭಿನಯಿಸುವುದು ಕಷ್ಟ ಆಗಲಿಲ್ಲ ಎಂದು ತನ್ನ ಅನುಭವ ಹೇಳಿಕೊಂಡರು. ಪೆಟ್ರೋಲ್ ಪ್ರಸನ್ನ ಕೂಡ ತನ್ನ  ಪಾತ್ರದ ಬಗ್ಗೆ  ಹೇಳಿಕೊಂಡರು. ಡಿಸ್ಕೋ ಶಾಂತಿ ತಂಗಿ ಸುಚಿತ್ರಾ ಐಟಂ ಡ್ಯಾನ್ಸರ್ ಆಗಿ ಅಭಿನಯಿಸಿದ್ದಾರೆ. ಈ ಚಿತ್ರವು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಈ ವಾರ ತೆರೆಕಾಣುತ್ತಿದೆ. ಗಣಪನ ಅಬ್ಬರ ಯಾವ ಪರಿ ಇರುತ್ತದೆ ಎಂಬುದನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಬೇಕಿದೆ.

Write A Comment