ಮನೋರಂಜನೆ

ಅಭಿಮಾನಿ ಕುಟುಂಬಕ್ಕೆ ಸದ್ದಿಲ್ಲದೇ ನೆರವಾದ ಕಿಚ್ಚ ಸುದೀಪ್

Pinterest LinkedIn Tumblr

3556Sudeep

‘ರನ್ನ’ ಚಿತ್ರದ ಬಿಡುಗಡೆ ದಿನದಂದು ಆಕಸ್ಮಿಕವಾಗಿ ಸಾವನ್ನಪ್ಪಿದ ರಾಯಣ್ಣ ಎಂಬವರ ಕುಟುಂಬಕ್ಕೆ ಕಿಚ್ಚ ಸುದೀಪ್ ಸದ್ದಿಲ್ಲದೇ ನೆರವಾಗಿದ್ದಾರೆ. ಅಲ್ಲದೇ ಇಂತದ್ದನ್ನೆಲ್ಲಾ ತಾವು ಪ್ರಚಾರಕ್ಕೆ ಬಳಸಿಕೊಳ್ಳಲು ಬಯಸುವುದಿಲ್ಲವೆಂದು ಹೇಳುವ ಮೂಲಕ ದೊಡ್ಡತನ ಮೆರೆದಿದ್ದಾರೆ.

ರಾಯಣ್ಣ ಮೃತಪಟ್ಟ ವೇಳೆ ಸುದೀಪ್ ಆಘಾತ ವ್ಯಕ್ತಪಡಿಸಿದ್ದರಲ್ಲದೇ ಅವರ ಆತ್ಮಕ್ಕೆ ಶಾಂತಿ ಕೋರಿದ್ದರು. ಆದರೆ ರಾಯಣ್ಣನ ಕುಟುಂಬಕ್ಕೆ ಸುದೀಪ್ ಯಾವುದೇ ನೆರವು ನೀಡಿಲ್ಲವೆಂದು ಕುಹಕಿಗಳು ಸಾಮಾಜಿಕ ಜಾಲ ತಾಣದಲ್ಲಿ ಬೊಬ್ಬೆ ಹೊಡೆದಿದ್ದರು.

ಆದರೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳ ಸಂಘದ ಮೂಲಕ ರಾಯಣ್ಣನ ಕುಟುಂಬಕ್ಕೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದಾರೆಂದು ತಿಳಿದುಬಂದಿದೆ. ಸ್ವತಃ ತಾವೇ ಭೇಟಿ ನೀಡಬಹುದಾಗಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಇಂತಹ ವಿಷಯಗಳನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುವುದು ತಮಗಿಷ್ಟವಿಲ್ಲವೆಂದು ಹೇಳಿದ್ದಾರೆ.

Write A Comment