ಮನೋರಂಜನೆ

ಮತ್ತೆ ಬರಲಿದೆ ತ್ರಿಕೋನ ಪ್ರೇಮಕಥೆ

Pinterest LinkedIn Tumblr

jessie

ಬೆಂಗಳೂರು: ಗೋವಿಂದಾಯ ನಮಃ, ಗೂಗ್ಲಿ ಮತ್ತು ರಣವಿಕ್ರಮ ಹೀಗೆ ವಿವಿಧ ಬಗೆಯ ಸಿನೆಮಾಗಳನ್ನು ನಿರ್ದೇಶಿಸಿ ಯಶಸ್ಸು ಗಳಿಸಿರುವ ನಿರ್ದೇಶಕ ಪವನ್ ಒಡೆಯರ್ ಈಗ ತ್ರಿಕೋನ ಪ್ರೇಮಕಥೆಯೊಂದನ್ನು ನಿರ್ದೇಶಿಸುವುದಕ್ಕೆ ಸಿದ್ಧರಾಗಿದ್ದಾರೆ. ಅಂದಹಾಗೆ ಕನ್ನಡ ಚಿತ್ರರಂಗ ತ್ರಿಕೋನ ಪ್ರೇಮಕಥೆ ಕಂಡು ಸಾಕಷ್ಟು ಸಮಯವಾಯಿತಲ್ಲವೇ?

‘ಜೆಸ್ಸಿ’ ಶೀರ್ಷಿಕೆಯಡಿ ಸಿದ್ಧವಾಗುತ್ತಿರುವ ಸಿನೆಮಾದಲ್ಲಿ ಧನಂಜಯ್, ಪರುಲ್ ಯಾದವ್ ಮತ್ತು ರಘು ಮುಖರ್ಜಿ ನಟಿಸಲಿದ್ದಾರೆ. ಮಧ್ಯಮ ವರ್ಗದ ಜನರಲ್ಲಿ ಜಾತಿ ಮತ್ತು ಧರ್ಮ ಪ್ರೀತಿಗೆ ಹೇಗೆ ಅಡ್ಡ ಬರುತ್ತದೆ ಎಂಬುದನ್ನು ಸಿನೆಮಾ ಚರ್ಚಿಸಲಿದೆಯಂತೆ. “ಈ ರೀತಿಯ ಪ್ರಣಯ ಚಲನಚಿತ್ರಗಳು ೯೦ರ ದಶಕದಲ್ಲಿ ಅತಿ ಹೆಚ್ಚಾಗಿ ಬರುತ್ತಿದ್ದವು. ಇದಕ್ಕೆ ಅತಿ ಉತ್ತಮ ಉದಾಹರಣೆ ತ್ರಿಕೋನ ಪ್ರೇಮ ಕಥೆ ನಮ್ಮೂರ ಮಂದಾರ ಹೂವೆ. ಇತ್ತೀಚಿನ ದಿನಗಳಲ್ಲಿ ಆ ಬಗೆಯ ಸಿನೆಮಾಗಳನ್ನು ನಾವು ಕಾಣುತ್ತಿಲ್ಲ” ಎನ್ನುತ್ತಾರೆ ಪವನ್.

ಜೆಸ್ಸಿ ಸಿನೆಮಾದ ಮೊದಲ ನೋಟದಲ್ಲಿ ಧನಂಜಯ್ ಕ್ರಿಶ್ಚಿಯನ್ ಸಮುದಾಯದ ಜೆಸ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ರಘು ಮುಖರ್ಜಿ ಶ್ಯಾಮ್ ಪ್ರಸಾದ್ ಆಗಿ, ಆಸ್ಟ್ರೇಲಿಯಾದಿಂದ ಹಿಂದಿರುಗುವ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಪರುಲ್ ಯಾದವ್, ಸಾಂಪ್ರದಾಯಿಕ ಬ್ರಾಹ್ಮಣ ಹುಡುಗಿ ನಂದಿನಿಯಾಗಿ ಕಾಣಿಸಿಕೊಂಡಿದ್ದಾರೆ.

ಜುಲೈ ೧೫ ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರೀಕಾರಣದ ಜಾಗಗಳ ಹುಡುಕಾಟಕ್ಕೆ ಪವನ್ ಸದ್ಯಕ್ಕೆ ಕೇರಳದಲ್ಲಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತವಿರುವ ಸಿನೆಮಾಗೆ ಪವನ್ ಅವರೇ ಎರಡು ಹಾಡುಗಳನ್ನು ಬರೆದಿದ್ದಾರಂತೆ.

ಅವಿನಾಶ್, ರಾಮಕೃಷ್ಣ, ಸಾಧು ಕೋಕಿಲಾ ಮತ್ತು ಚಿಕ್ಕಣ್ಣ ಕೂಡ ಸಿನೆಮಾದಲ್ಲಿ ಅಭಿನಯಿಸಲಿದ್ದಾರೆ.

Write A Comment