ಮನೋರಂಜನೆ

ನಾನು ಜೈಲಿಗೆ ಹೋಗಿಲ್ಲ ಎಂದ ‘ರನ್ನ’ ನಿರ್ಮಾಪಕ ಚಂದ್ರಶೇಖರ್

Pinterest LinkedIn Tumblr

ranna-movie

ಕಳೆದ ಕೆಲವು ದಿನಗಳಿಂದ ರನ್ನ ಚಿತ್ರದ ಹಂಚಿಕೆ ಸಂಬಂಧ ಎದ್ದಿದ್ದ ಗೊಂದಲಗಳಿಗೆ ನಿರ್ಮಾಪಕ ನಿಮಿಷಾಂಭ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ರನ್ನ ಚಿತ್ರದ ಸಲುವಾಗಿ ವಿತರಕರೊಡನೆ ನನಗೆ ತಕರಾರಿದೆ. ಜೊತೆಗೆ ಆರ್ಥಿಕವಾಗಿ ಕಷ್ಟದಲ್ಲಿದ್ದೇನೆ. ಆದರೆ ಪತ್ರಿಕೆಯಲ್ಲಿ ವರದಿಯಾದಂತೆ ನಾನು ಜೈಲಿಗೆ ಹೋಗಿಲ್ಲ.  ನನ್ನ ಮೇಲಿದ್ದ ಎಲ್ಲಾ ಕೇಸುಗಳಲ್ಲಿಯೂ ನಾನು ಖುಲಾಸೆ ಆಗಿದ್ದೇನೆ. ಇದು ರನ್ನ ಚಿತ್ರದ ನಿರ್ಮಾಪಕ  ಚಂದ್ರಶೇಖರ್ ಜೈಲಿಗೆ ಹೋಗಿದ್ದರು ಎಂದು ಪ್ರಕಟವಾದ ಸುದ್ದಿಗೆ ಅವರು ಕೊಟ್ಟಿರುವ ಸ್ಪಷ್ಟನೆ.

ಹಾಗಾಗಿ ಅವರು ಜೈಲಿಗೆ ಹೋಗಿದ್ದರು ಎಂಬ ಸುದ್ದಿ ನೋಡಿ ಅಸಮಾಧಾನಗೊಂಡಿದ್ದ ನಿರ್ಮಾಪಕ ಚಂದ್ರಶೇಖರ್ ಅವರು ಹಲವು ದಿನಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಹೀಗಿರುವಾಗ ಗಾಯದ ಮೇಲೆ ಬರೆ ಎಳೆಯುವುದು ಯಾವ ನ್ಯಾಯ ಎಂಬುದು ಅವರ ಪ್ರಶ್ನೆ. ಕೆಲವು ಕೇಸುಗಳ ವಿಚಾರದಲ್ಲಿ ಅವರು ಬಸವೇಶ್ವರ ನಗರದ ಪೊಲೀಸ್ ಸ್ಟೇಷನ್ ನಲ್ಲಿ ಕೆಲವು ನಿಮಿಷಗಳವರೆಗೆ ಇದ್ದುದ್ದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.

Write A Comment