ರಾಷ್ಟ್ರೀಯ

ಅಗ್ಗದ ಬೆಲೆಯಲ್ಲಿ ಸಿಗಲಿದೆ 4G ಸ್ಮಾರ್ಟ್ ಫೋನ್ !!

Pinterest LinkedIn Tumblr

9813Relianceಇಂದಿನ ಯುವಕರ ಮೊದಲ ಆದ್ಯತೆ ಸ್ಮಾರ್ಟ್ ಫೋನ್ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಕೆಲವೊಮ್ಮೆ ಹಣಕಾಸಿನ ಸಮಸ್ಯೆ ಸ್ಮಾರ್ಟ್ ಫೋನ್ ಕೊಳ್ಳುವ  ಆಸೆ ಕನಸಾಗಿಯೇ ಉಳಿಯುತ್ತದೆ. ಆದರೆ ಇನ್ನು ಅದಕ್ಕಾಗಿ ಚಿಂತಿಸಬೇಕಿಲ್ಲ. ಏಕೆ ಅಂತೀರಾ ಈ ಸ್ಟೋರಿ ಓದಿ.

ಹೌದು. ಮುಕೇಶ್ ಅಂಬಾನಿ ಸಾರಥ್ಯದ ರಿಲಯನ್ಸ್ ಇಂಡಸ್ಟ್ರೀಸ್ ಟೆಲಿಕಾಂ ಅಂಗವಾದ ರಿಲಯನ್ಸ್ ಜಿಯೋ ಈ ವರ್ಷದ ಡಿಸೆಂಬರ್‌ನಲ್ಲಿ ಬಹುನಿರೀಕ್ಷಿತ 4ಜಿ ಸೇವೆಗಳನ್ನು ಆರಂಭಿಸಲಿದ್ದು  ವಿವಿಧ ಹ್ಯಾಂಡ್ ಸೆಟ್ ತಯಾರಕರ ಜೊತೆ ಸಹಯೋಗದಿಂದ 4 ಜಿ ಬೆಂಬಲಿತ ಸ್ಮಾರ್ಟ್‌ಫೋನ್‌ಗಳನ್ನು 4000ರೂ.ಗಿಂತ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುತ್ತೇವೆ ಎಂದು ಅಂಬಾನಿ ಸ್ಪಷ್ಟಪಡಿಸಿದ್ದಾರೆ.

ಎಲ್‌ಟಿಇ ತಂತ್ರಜ್ಞಾನ ಬಳಸಿಕೊಂಡು 800 ಎಂಎಚ್‌z, 1800 ಎಂಎಚ್‌z ಮತ್ತು 2300ಎಂಎಚ್‌z ಬ್ಯಾಂಡ್‌ಗಳಲ್ಲಿ ರಿಲಯನ್ಸ್ ಜಿಯೋ 4ಜಿ ಸೇವೆಗಳನ್ನು ಒದಗಿಸಲು ಯೋಜನೆ ರೂಪಿಸಿದ್ದು ಈ ಮೂಲಕ ರಿಲಯನ್ಸ್ ಜಿಯೊ ಟೆಲಿಕಾಂ ಉದ್ಯಮದಲ್ಲಿ 70,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಕಂಪನಿ ನಿರ್ಧರಿಸಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದು ಆ ಮೂಲಕ ಪ್ರತಿಯೊಬ್ಬ ಭಾರತೀಯರ ಕೈನಲ್ಲಿಯೂ ಸ್ಮಾರ್ಟ್ ಫೋನ್ ಇರಬೇಕೆಂಬುದೇ  ನಮ್ಮ ಉದ್ದೇಶ ಎಂದು ವಿವರಿಸಿದ್ದಾರೆ.

Write A Comment