ಮನೋರಂಜನೆ

‘ಕ್ವೀನ್’, ‘ಹೈದರ್‌’ಗೆ ಐಫಾ ಕಿರೀಟ

Pinterest LinkedIn Tumblr

kangana

ಕೌಲಲಾಂಪುರ: ವಿಕಾಸ್‌ ಬಾಲ್‌ ನಿರ್ದೇಶನದ ‘ಕ್ವೀನ್‌’ ಹಾಗೂ ವಿಶಾಲ್‌ ಭಾರದ್ವಾಜ್‌ ನಿರ್ದೇಶನದ ‘ಹೈದರ್‌’ ಚಿತ್ರಗಳು  2015ನೇ  ಸಾಲಿನ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ(ಐಫಾ) ಅವಾರ್ಡ್ಸ್‌ನಲ್ಲಿ ತಲಾ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

‘ಕ್ವೀನ್‌’ಗೆ ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಥೆ ಹಾಗೂ ಚಿತ್ರದ ನಾಯಕಿ ಕಂಗನಾ ರಣಾವತ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಸಿಕ್ಕಿದೆ.

ಇದೇ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಕಂಗನಾ ರಣಾವತ್ ಅವರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು, ‘ಹೈದರ್‌’ ಚಿತ್ರದ ಅಭಿನಯಕ್ಕಾಗಿ ಶಾಹಿದ್‌ ಕಪೂರ್ ಅವರಿಗೆ ಉತ್ತಮ ನಟ ಪ್ರಶಸ್ತಿ ಸಿಕ್ಕಿದೆ.

ಹೈದರ್‌ ಚಿತ್ರದಲ್ಲಿ ಶಾಹಿದ್‌ ಅವರ ತಾಯಿ ಪಾತ್ರ ನಿರ್ವಹಿಸಿದ್ದ ನಟಿ ತಬು ಅವರು ಅತ್ಯುತ್ತಮ  ಪೋಷಕ ನಟಿ ಹಾಗೂ ಸಹ ನಟ ಕೇ ಕೇ ಮೆನನ್‌ ಅವರು ಅತ್ಯುತ್ತಮ  ಖಳನಾಯಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ವಿಜೇತರ ಪಟ್ಟಿ

ಅತ್ಯುತ್ತಮ ಚಿತ್ರ – ಕ್ವೀನ್

ಅತ್ಯುತ್ತಮ ನಟ: ಶಹೀದ್ ಕಪೂರ್, ಹೈದರ್

ಅತ್ಯುತ್ತಮ ನಟಿ: ಕಂಗನಾ ರನೌತ್, ಕ್ವೀನ್

ಅತ್ಯುತ್ತಮ ನಿರ್ದೇಶಕ: ರಾಜ್ ಕುಮಾರ್ ಹಿರಾನಿ, ಪಿಕೆ

ಅತ್ಯುತ್ತಮ ಚಿತ್ರಕಥೆ: ವಿಕಾಸ್ ಬಾಹ್ಲ್, ಚೈತಾಲಿ ಪಾರ್ಮರ್, ಪರ್ವೇಶ್ ಶೇಖ್ (ಕ್ವೀನ್)

ಅತ್ಯುತ್ತಮ ಪೋಷಕ ನಟಿ: ತಬು, ಹೈದರ್

ಅತ್ಯುತ್ತಮ ಪೋಷಕ ನಟ: ರಿತೇಶ್ ದೇಶ್ ಮುಖ್, ಎಕ್ ವಿಲನ್

ಅತ್ಯುತ್ತಮ ನೆಗಟಿವ್ ಪಾತ್ರಧಾರಿ : ಕೆಕೆ ಮೆನನ್, ಹೈದರ್

ಉದಯೋನ್ಮುಖ ನಟಿ : ಕೃತಿ ಸನೋನ್, ಹೀರೋಪಂತಿ.

ಉದಯೋನ್ಮುಖ ನಟ: ಟೈಗರ್ ಶ್ರಾಫ್, ಹೀರೋಪಂತಿ.

ಉದಯೋನ್ಮುಖ ನಿರ್ದೇಶಕ: ಒಮಂಗ್ ಕುಮಾರ್, ಮೇರಿ ಕೋಮ್

ಅತ್ಯುತ್ತಮ ಸಂಗೀತ ನಿರ್ದೇಶಕ: ಶಂಕರ್ ಎಹಸಾನ್-ಲಯ್, 2 ಸ್ಟೇಟ್ಸ್

ಅತ್ಯುತ್ತಮ ಗಾಯಕ : ಅಂಕಿತ್ ತಿವಾರಿ, ಗಲಿಯಾ (ಎಕ್ ವಿಲನ್)

ಅತ್ಯುತ್ತಮ ಗಾಯಕಿ: ಕನಿಕಾ ಕಪೂರ್, ಬೇಬಿ ಡಾಲ್ (ರಾಗಿಣಿ ಎಂಎಂಎಸ್ 2)

ಅತ್ಯುತ್ತಮ ಹಾಸ್ಯ ಪಾತ್ರಧಾರಿ : ವರುಣ್ ಧವನ್ , ಮೈ ತೇರಾ ಹೀರೋ.

Write A Comment