ಮನೋರಂಜನೆ

ತಮಿಳು ಚಿತ್ರ ನೋಡಿ ಪ್ರಭಾವಿತರಾದ ಧೋನಿ ಮಾಡಿದ್ದೇನು..?

Pinterest LinkedIn Tumblr

2287dhoni_30

ಟೀಮ್ ಇಂಡಿಯಾದ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿ ಏನೆಂದರೆ ಧೋನಿ ತಮಿಳು ಚಿತ್ರಗಳನ್ನು ವೀಕ್ಷಿಸುತ್ತಾರೆಂಬುದು ಬಹುತೇಕರಿಗೆ ಗೊತ್ತಿಲ್ಲದ ವಿಚಾರ.

ಇತ್ತೀಚೆಗೆ ಇಂಗ್ಲೀಷ್ ಸಬ್ ಟೈಟಲ್ ನೊಂದಿಗೆ ತಮಗಾಗಿ ಏರ್ಪಡಿಸಲಾಗಿದ್ದ ತಮಿಳು ಚಿತ್ರ ‘ಕಾಕಾ ಮುತೈ’ ನೋಡಿ ಪ್ರಭಾವಿತರಾಗಿರುವ ಮಹೇಂದ್ರ ಸಿಂಗ್ ಧೋನಿ ಆ ಚಿತ್ರದಲ್ಲಿ ಬಾಲ ನಟರಾಗಿ ಅದ್ಬುತ ನಟನೆ ಮಾಡಿದ್ದ ರಮೇಶ್ ಹಾಗೂ ವಿಘ್ನೇಶ್ ರನ್ನು ತಾವಿರುವ ಹೋಟೆಲಿಗೆ ಕರೆಸಿಕೊಂಡು ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ. ಕ್ರಿಕೆಟ್ ಹಾಗೂ ಧೋನಿಯವರ ಅಪ್ಪಟ ಅಭಿಮಾನಿಯಾಗಿರುವ ಈ ಬಾಲಕರೂ ಧೋನಿ ಭೇಟಿಯಿಂದ ಪುಳಕಿತರಾಗಿದ್ದಾರೆ.

‘ಕಾಕಾ ಮುತೈ’ ಚಿತ್ರವನ್ನು ಫಾಕ್ಸ್ ಸ್ಟಾರ್ ಸಹಕಾರದೊಂದಿಗೆ ಧನುಷ್ ಹಾಗೂ ವೆಟ್ರಿ ಮಾರನ್ ನಿರ್ಮಿಸಿದ್ದು, ಅತ್ಯುತ್ತಮ ಚಿತ್ರವಾಗಿರುವ ಇದು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಚಿತ್ರದ ಕುರಿತು ಮಹೇಂದ್ರ ಸಿಂಗ್ ಧೋನಿ ಮಾತ್ರವಲ್ಲದೇ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಕೂಡಾ ಫಿದಾ ಆಗಿದ್ದಾರೆ. ಈ ಚಿತ್ರದ ನಟನೆಗಾಗಿ ಅತ್ಯುತ್ತಮ ಬಾಲ ನಟ ಪ್ರಶಸ್ತಿಯೂ ಸಿಕ್ಕಿದೆ. ಅಲ್ಲದೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನಗೊಂಡಿದೆ.

Write A Comment