ಮನೋರಂಜನೆ

ಕರೀನಾ ಕಪೂರ್ ಜೊತೆ ನಟನೆ ಮಾಡಲು ಸಿಕ್ಕಿರುವ ಅವಕಾಶ ನನ್ನ ಅದೃಷ್ಟ: ಆಲಿಯಾ ಭಟ್

Pinterest LinkedIn Tumblr

alia

ಉಡ್ತಾ ಪಂಜಾಬ್ ನಲ್ಲಿ ಕರೀನಾ ಕಪೂರ್ ಜೊತೆ ನಟನೆ ಮಾಡಲು ಸಿಕ್ಕಿರುವ ಅವಕಾಶ ನನ್ನ ಅದೃಷ್ಟ ಎಂದು ಬಾಲಿವುಡ್ ನ ಮುದ್ದು ಮುಖದ ಸುಂದರಿ ಆಲಿಯಾ ಭಟ್ ಹೇಳಿದ್ದಾರೆ.

ಅಭಿಶೇಕ್ ಚೌಬೆ ನಿರ್ದೇಶನದ ಉಡ್ತಾ ಪಂಜಾಬ್ ಚಿತ್ರದಲ್ಲಿ ಈಗಾಗಲೇ ಕರೀನಾ ಕಪೂರ್ ಖಾನ್ ಹಾಗೂ ದಿಲ್ ದಿತ್ ದೊಸಂಜಿಹ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಇದೀಗ ಆಲಿಯಾ ಭಟ್ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಆಲಿಯಾ ಭಟ್, ಉಡ್ತಾ ಚಿತ್ರದ ಬಗ್ಗೆ ಮಾತನಾಡುವ ಸಂದರ್ಭ ಇಷ್ಟು ಬೇಗ ಬರುತ್ತದೆ ಎಂದು ಅಂದುಕೊಂಡರಲಿಲ್ಲ. ಕರೀನಾ ಕಪೂರ್ ಜೊತೆ ಕೆಲಸ ಮಾಡುವುದು ನನ್ನ ಅದೃಷ್ಟವಾಗಿದೆ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು, ಬಹಳ ಸಂತೋಷವಾಗುತ್ತಿದೆ. ಇದು ನನ್ನ ಜೀವನದ ದೊಡ್ಡ ಅವಕಾಶವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಕರೀನಾ ನನ್ನ ಆರಾಧ್ಯ ದೈವವಾಗಿದ್ದು, ಮನುಷ್ಯನ ರೀತಿಯಲ್ಲಿ ಭೂಮಿಗೆ ಬಂದ ದೇವತೆಯಾಗಿದ್ದಾರೆ. ಉಡ್ತಾ ಪಂಜಾಬ್ ಚಿತ್ರದಲ್ಲಿ ಕರೀನಾ ಕಪೂರ್ ಯಾವ ರೀತಿಯಲ್ಲಿ ನಟಿಸುತ್ತಿದ್ದಾರೆ ಎಂಬುದನ್ನು ಈಗಾಗಲೇ ಗಮನಿಸಿದ್ದೇನೆ. ನಟನೆಯಲ್ಲಿ ಕರೀನಾ ಕಪೂರ್ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಆಲಿಯಾ ಭಟ್ ಕರೀನಾ ಕಪೂರ್ ಅವರನ್ನು ಹಾಡಿಹೊಗಳಿದ್ದಾರೆ.

ಯಾವುದೇ ಕೆಲಸ ಮಾಡಿದರೂ ಒತ್ತಡ, ಕಷ್ಟಗಳು ಎಂಬುದು ಇದ್ದೇ ಇರುತ್ತದೆ. ಯಾವ ಕೆಲಸವೂ ಸುಲಭವಲ್ಲ. ದೊಡ್ಡ ಸಿನಿಮಾಗಳು ಮಾಡಿದ ತಕ್ಷಣ ಕಷ್ಟ, ಒತ್ತಡ ಹೆಚ್ಚಿರುತ್ತದೆ ಎಂಬುದು ತಪ್ಪು ಕಲ್ಪನೆ. ಕಷ್ಟಗಳಿರುತ್ತವೆಂದು ನಾನು ಎಂದಿಗೂ ಕೆಲಸದಿಂದ ಹೊರಗುಳಿಯುವವಳಲ್ಲ. ಈ ರೀತಿಯ ಕಷ್ಟಗಳಿಗೆ ನಾನು ಹೆದರುವುದಿಲ್ಲ. ಜನರನ್ನು ಮನರಂಜಿಸಲು ಸಾಧ್ಯವಾದಷ್ಟು ಪ್ರಯತ್ನವನ್ನು ನಾನು ಮಾಡುತ್ತೇನೆ. ನನ್ನ ಪರಿಶ್ರಮವನ್ನು ಜನರು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ.

ಉಡ್ತಾ ಪಂಜಾಬ್ ಚಿತ್ರದಲ್ಲಿ ಶಾಹಿದ್ ಕಪೂರ್ ಪ್ರಮುಖ ಪಾತ್ರವಹಿಸುತ್ತಿದ್ದು, ಪಂಜಾಬ್ ನಲ್ಲಿ ಹರಡಿರುವ ಡ್ರಗ್ ಮಾಫಿಯಾದ ಕುರಿತ ಕಥೆ ಈ ಚಿತ್ರದ್ದಾಗಿದೆ.

Write A Comment