ಮನೋರಂಜನೆ

ನಟಿ ಆರತಿ ಅಗರ್ವಾಲ್ ನಿಧನ

Pinterest LinkedIn Tumblr

aarthi-agarwal-

ನ್ಯೂಜೆರ್ಸಿ: ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ದಕ್ಷಿಣ ಭಾರತದ ನಟಿ ಆರತಿ ಅಗರ್ವಾಲ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಟಾಲಿವುಡ್, ಕಾಲಿವುಡ್‌ನಲ್ಲಿ ಮಿಂಚಿದ್ದ ಆರತಿ, ‘ನೂವು ನಾಕು ನಚ್ಚಾವು’ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು.

ಮೆಗಾಸ್ಟಾರ್ ಚಿರಂಜೀವಿ ಹಾಗೂ ವಿಕ್ಟರಿ ವೆಂಕಟೇಶ್ ಸೇರಿದಂತೆ ಹಲವು ನಟರೊಂದಿಗೆ ಅಭಿನಯಿಸಿದ್ದ ಆರತ್ ಅಗರ್ವಾಲ್ ಅವರು ಇಂದು ಅಮೆರಿಕದ ನ್ಯೂಜೆರ್ಸಿಯ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

2001ರಲ್ಲಿ ಪಾಗಲ್ ಪನ್ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಆರತಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ 2005ರಲ್ಲಿ ನಟ ತರುಣ್‌ರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರತಿ ಆತ್ಮಹತ್ಯೆಗೂ ಯತ್ನಿಸಿದ್ದರು.

Write A Comment