ಮನೋರಂಜನೆ

ವೇಶ್ಯಾವಾಟಿಕೆ ಜಾಲದಿಂದ ತೆಲುಗು ನಟಿ ರಕ್ಷಣೆ : ಪಿಂಪ್ ಬಂಧನ

Pinterest LinkedIn Tumblr

Telugu-Actress

ಪಣಜಿ, ಜೂ.3-ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಕೊಂಡಿದ್ದ ತೆಲುಗಿನ ನಟಿಯೊಬ್ಬಳನ್ನು ರಕ್ಷಿಸಿರುವ ಗೋವಾ ಪೊಲೀಸರು, ಜಾಲದ ಮುಖ್ಯಸ್ಥೆ (ಪಿಂಪ್)ಯನ್ನು ಬಂಧಿಸಿದ್ದಾರೆ. ಟಾಲಿವುಡ್‌ನ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಈ ನಟಿಯನ್ನು ಪಿಂಪ್ ಆಯಿಷಾ ಸಯ್ಯದ್ ಎಂಬುವಳು ತನ್ನ ಜಾಲದಲ್ಲಿ ಸೇರಿಸಿಕೊಂಡಿದ್ದಳು.

ಆಯಿಷಾ ಈ ನಟಿಯನ್ನು ದೊಡ್ಡ ದೊಡ್ಡ ರೆಸಾರ್ಟ್‌ಗಳಿಗೆ ಕಳುಹಿಸುತ್ತಿದ್ದಳು ಎಂದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಇಲಾಖೆಯ ಸಿಬ್ಬಂದಿಯೊಬ್ಬನನ್ನು ಇಲ್ಲಿನ ಸ್ಟಾರ್ ಹೊಟೇಲ್ ಒಂದಕ್ಕೆ ಕಳುಹಿಸಿದಾಗ ಆಯಿಷಾಳ ಜಾಲ ಪತ್ತೆಯಾಯಿತು. ನಂತರ ಹೊಟೇಲ್ ಮೇಲೆ ದಾಳಿ ಮಾಡಿದ ಪೊಲೀಸರ ತಂಡ ನಟಿಯನ್ನು ರಕ್ಷಿಸಿ ಪಿಂಪ್ ಆಯಿಷಾಳನ್ನು ಬಂಧಿಸಿದರು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ಧಾಂತ್ ಶಿರೋಡ್ಕರ್ ತಿಳಿಸಿದ್ದಾರೆ.  ರಕ್ಷಿಸಲಾದ ನಟಿಯನ್ನು ಮಹಿಳೆಯರ ರಕ್ಷಣಾ ನಿಲಯಕ್ಕೆ ಕಳುಹಿಸಿಕೊಡಲಾಗಿದೆ. ಬಂಧಿತ ಆಯಿಷಾ ಗೋವಾ ರಾಜ್ಯಾದ್ಯಂತ ತನ್ನ ಜಾಲವನ್ನು ಹೊಂದಿದ್ದು,  ಬಹುತೇಕ ಎಲ್ಲ ಸ್ಟಾರ್ ಹೊಟೇಲ್‌ಗಳು, ರೆಸಾರ್ಟ್‌ಗಳಲ್ಲೂ ಈಕೆ ಸಂಪರ್ಕ ಹೊಂದಿದ್ಧಾಳೆ. ಇವಳ ಪಟ್ಟಿಯಲ್ಲಿ ಅನೇಕ ಗಣ್ಯ ವ್ಯಕ್ತಿಗಳೂ ಇರುವ ಶಂಕೆಯಿದೆ ಎಂದು ಶಿರೋಡ್ಕರ್ ಹೇಳಿದ್ದಾರೆ.

Write A Comment