ಅಂತರಾಷ್ಟ್ರೀಯ

ಅಮೆರಿಕದ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಅಥ್ಲೀಟ್ ಈಗ ಅಜ್ಜ ಅಲ್ಲ ಅಜ್ಜಿ! ಲಿಂಗ ಪರಿವರ್ತನೆ ಹೊಂದಿದ 65 ವರ್ಷದ ಬ್ರೂಸ್ ಜೆನ್ನರ್

Pinterest LinkedIn Tumblr

ee

ನ್ಯೂಯಾರ್ಕ್: ಅಮೆರಿಕದ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಅಥ್ಲೀಟ್ ಬ್ರೂಸ್ ಜೆನ್ನರ್ ಮಹಿಳೆಯಾಗಿ ಬದಲಾಗಿದ್ದಾರೆ. ಲಿಂಗ ಪರಿವರ್ತನೆ ಹೊಂದಿರುವ 65 ವರ್ಷದ ಅವರೀಗ ಅಜ್ಜ ಅಲ್ಲ ಅಜ್ಜಿ ಆಗಿದ್ದಾರೆ.

ತಮ್ಮ ಹೊಸ ಅವತಾರವನ್ನು ‘ವ್ಯಾನಿಟಿ ಫೇರ್’ ಮ್ಯಾಗಜಿನ್ ಮೂಲಕ ತೆರೆದಿಟ್ಟಿರುವ ಜೆನ್ನರ್, ‘ನನ್ನನ್ನು ಇನ್ನು ಕೇತ್​ಲೀನ್’ ಎಂದು ಕರೆಯಿರಿ ಎಂದಿದ್ದಾರೆ. ‘ಬ್ರೂಸ್ ಸಾಕಷ್ಟು ಸುಳ್ಳುಗಳನ್ನು ಹೇಳಿದ್ದಾನೆ. ಆದರೆ ಕೇತ್​ಲೀನ್ ಯಾವುದೇ ರಹಸ್ಯಗಳನ್ನು ಇಟ್ಟುಕೊಂಡಿಲ್ಲ. ವ್ಯಾನಿಟಿ ಫೇರ್ ಹೊರಬಂದ ಬಳಿಕ ನಾನು ಸ್ವತಂತ್ರಳು’ ಎಂದೂ ಹೇಳಿದ್ದಾರೆ. ಇದಲ್ಲದೆ ‘ಃಕೇತ್​ಲೀನ್​ಙಜೆನ್ನರ್’ ಎಂಬ ಹೊಸ ಟ್ವಿಟರ್ ಖಾತೆಯನ್ನೂ ತೆರೆದಿದ್ದು, ‘ಸಾಕಷ್ಟು ಕಷ್ಟಗಳ ಬಳಿಕ ಕೊನೆಗೂ ನಾನು ನನ್ನ ನಿಜವಾದ ಜೀವನ ಬಾಳುತ್ತಿದ್ದೇನೆ’ ಎಂದಿದ್ದಾರೆ. ಈ ಟ್ವಿಟರ್ ಖಾತೆಗೆ ಕೇವಲ 4 ಗಂಟೆಗಳಲ್ಲೇ 10 ಲಕ್ಷ ಹಿಂಬಾಲಕರೂ ಸೇರಿದ್ದು, ಇದೊಂದು ಗಿನ್ನೆಸ್ ದಾಖಲೆಯೂ ಆಗಿದೆ!

40 ವರ್ಷಗಳ ಹಿಂದೆ ಡೆಕಥ್ಲಾನ್​ನಲ್ಲಿ ವಿಶ್ವದಾಖಲೆ ರಚಿಸಿದ್ದ ಬ್ರೂಸ್, ಈ ವರ್ಷದ ಆರಂಭದಲ್ಲಿ 3ನೇ ಪತ್ನಿ ಕ್ರಿಸ್ ಜೆನ್ನರ್ ಜತೆಗಿನ 24 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಿದ್ದರು. ಬಳಿಕ ಮಾರ್ಚ್​ನಲ್ಲಿ ಅವರ ಸ್ತ್ರೀ ಪರಿವರ್ತನಾ ಪ್ರಕ್ರಿಯೆಯ ಶಸ್ತ್ರಚಿಕಿತ್ಸೆಗಳು ನಡೆದಿದ್ದವು. ಅವರೀಗ ಅಮೆರಿಕದಲ್ಲಿ ಲಿಂಗ ಪರಿವರ್ತಿತರಾದ ಅತ್ಯಂತ ಹೈ-ಪ್ರೊಫೈಲ್ ವ್ಯಕ್ತಿಯಾಗಿದ್ದಾರೆ. ಅವರ ಲಿಂಗಪರಿವರ್ತನೆ ಬಗೆಗಿನ ಸಾಕ್ಷ್ಯತ್ರವೂ ಜುಲೈನಲ್ಲಿ ಬಿಡುಗಡೆಯಾಗಲಿದೆ.

3 ಮದುವೆ, 6 ಮಕ್ಕಳ ಅಪ್ಪ!

ಪುರುಷನಾಗಿದ್ದಾಗ ಕ್ರಿಸ್ಟಿ ಕ್ರೌನ್​ಓವರ್ (1972-81), ಲಿಂಡಾ ಥಾಮ್ಸನ್ (1991-1986) ಮತ್ತು ಕ್ರಿಸ್ ಜೆನ್ನರ್ (1991-2015) ಎಂಬ ಮೂವರು ಮಹಿಳೆಯರನ್ನು ವಿವಾಹವಾಗಿರುವ ಅವರು ಒಟ್ಟು 6 ಮಕ್ಕಳ ಅಪ್ಪನೂ ಆಗಿದ್ದಾರೆ.

ಲಿಂಗ ಪರಿವರ್ತನೆಗೊಂಡ ಕ್ರೀಡಾಪಟುಗಳು

ರಿನೀರಿಚರ್ಡ್ಸ್: ರಿಚರ್ಡ್ ರಾಸ್ಕಿಂಡ್ ಎಂಬ ಅಮೆರಿಕದ ಪುರುಷ 1975ರಲ್ಲಿ ಮಹಿಳೆ ಯಾಗಿ ಬದಲಾದ ಬಳಿಕ ಟೆನಿಸ್ ಆಟಗಾರ್ತಿಯಾಗಿದ್ದರು. 1977ರ ಯುಎಸ್ ಓಪನ್​ನ ಡಬಲ್ಸ್ ವಿಭಾಗದಲ್ಲಿ ಫೈನಲ್​ಗೇರಿ ಮಿಂಚಿದ್ದರು.

ಮಿಯಾನ್ನೆ ಬಗ್ಗರ್: ಲಿಂಗ ಪರಿವರ್ತನೆ ಬಳಿಕ ಕ್ರೀಡೆಯಲ್ಲಿ ಮಿಂಚಿದ ಪ್ರಮುಖರಲ್ಲೊಬ್ಬರು. ಆಸ್ಟ್ರೇಲಿಯಾದ ಪ್ರಮುಖ ಗಾಲ್ಪ್ ಆಟಗಾರ್ತಿಯಾಗಿರುವ ಬಗ್ಗರ್ ಈಗಲೂ ವೃತ್ತಿಪರ ಕ್ರೀಡೆಯಲ್ಲಿ ಮಿಂಚುತ್ತಿದ್ದಾರೆ.

ಫಾಲೋನ್ ಫಾಕ್ಸ್: ಪುರುಷನಾಗಿ ಹುಟ್ಟಿದ್ದ ಫಾಕ್ಸ್ ಅಮೆರಿಕ ನೇವಿಯಲ್ಲೂ ಸೇವೆಸಲ್ಲಿಸಿದ್ದರು. ಹೆಣ್ಣಾಗಿ ಪರಿವರ್ತನೆ ಆದ ಬಳಿಕ ಮಿಶ್ರ ಮಾರ್ಷಲ್ ಆರ್ಟ್ಸ್ ಕರಗತ ಮಾಡಿಕೊಂಡ ಅವರು ಇದೇ ಕ್ರೀಡೆಯಲ್ಲಿ ಯಶ ಕಂಡಿದ್ದಾರೆ.

Write A Comment