ರಾಷ್ಟ್ರೀಯ

ಜೈನ ಸನ್ಯಾಸಿಯೊಬ್ಬರ ಪ್ರವಚನದಿಂದ ಪ್ರಭಾವಿತರಾದ 600 ಕೋಟಿ ರು. ಆಸ್ತಿ ಒಡೆಯ ಈಗ ಸನ್ಯಾಸಿ

Pinterest LinkedIn Tumblr

doshi

ಅಹಮದಾಬಾದ್: ಪ್ಲಾಸ್ಟಿಕ್ ಕಿಂಗ್ ಎಂದೇ ಕರೆಸಿಕೊಂಡಿದ್ದ, ದೆಹಲಿ ಮೂಲದ ರು.600 ಕೋಟಿ ಮೌಲ್ಯದ ಆಸ್ತಿಯ ಒಡೆಯರೊಬ್ಬರು ತಮ್ಮ 58ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಒಂದು ಕಾಲದಲ್ಲಿ ರಸ್ತೆಬದಿಯ ಗಾಡಿಯಲ್ಲಿ ಮೇಣದಬತ್ತಿ ಮಾರುತ್ತಿದ್ದ ಭನ್ವರ್ ಲಾಲ್ ದೋಶಿ ಅವರು ಕೋಟ್ಯಂತರ ಮೌಲ್ಯದ ಪ್ಲಾಸ್ಟಿಕ್ ಕಂಪನಿ ಡಿ.ಆರ್. ಇಂಟರ್ ನ್ಯಾಷನಲ್ ಕಟ್ಟಿದ್ದೇ ಒಂದು ಸಾಹಸ. ಜೈನ ಸನ್ಯಾಸಿಯೊಬ್ಬರ ಪ್ರವಚನದಿಂದ ಪ್ರಭಾವಿತರಾಗಿದ್ದ ದೋಶಿ ಅವರು ಈ ಹಿಂದೆಯೇ ಸರ್ವ ಸಂಘ ಪರಿತ್ಯಾಗಿಯಾಗಲು ಹೊರಟಿದ್ದರು.

ಹೀಗೆಂದು “ದ ಟೆಲಿಗ್ರಾಂ ಆಂಗ್ಲ ದೈನಿಕ ವರದಿ ಮಾಡಿದೆ. ಆದರೆ, ಕುಟುಂಬದವರ ಒತ್ತಡಕ್ಕೆ ಬಿದ್ದು ಸಂಸಾರ ಬಂಧನದಲ್ಲಿದ್ದರು. ಈಗ ಕುಟುಂಬದವರ ಒಪ್ಪಿಗೆ ಪಡೆದೇ ಅವರು ಸನ್ಯಾಸ ದೀಕ್ಷೆ ತೆಗೆದುಕೊಂಡಿದ್ದಾರೆ.

ದೋಶಿ ಅವರು ಜೈನ ಆಚಾರ್ಯ ಶ್ರೀ ಗುಣರತ್ನ ಸುರೀಶ್ವರಜೀ ಮಹಾರಾಜ್ ಅವರಲ್ಲಿ ದೀಕ್ಷೆ ಪಡೆದುಕೊಂಡಿದ್ದಾರೆ. ಅಹಮದಾಬಾದ್‍ನಲ್ಲಿ ಸುಮಾರು ಮೂರು ದಿನಗಳ ಕಾಲ ನಡೆದ ಈ ದೀಕ್ಷೆ ಕಾರ್ಯಕ್ರಮದಲ್ಲಿ 1.5 ಲಕ್ಷ ಮಂದಿ ಪಾಲ್ಗೊಂಡಿದ್ದರು.

Write A Comment