ಮನೋರಂಜನೆ

ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡ 92ರ ವೃದ್ಧೆ ಹ್ಯಾರಿಯೆಟ್ ಥಾಂಪ್ಸನ್

Pinterest LinkedIn Tumblr

ame

ಸ್ಯಾನ್ ಡಿಯಾಗೊ, ಜೂ.1: ಅಮೆರಿಕದ 92ರ ಹರೆಯದ ವಯೋವೃದ್ದೆ ಸ್ಯಾನ್ ಡಿಯಾಗೊ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡು ಹೊಸ ದಾಖಲೆ ಬರೆದರು. 92 ವರ್ಷ, 65 ದಿನಗಳ ವಯಸ್ಸಿನ ಕ್ಯಾನ್ಸರ್‌ನಿಂದ ಬದುಕುಳಿದ ವೃದ್ಧೆ ಹ್ಯಾರಿಯೆಟ್ ಥಾಂಪ್ಸನ್ ಸಾವಿರಾ ರು ಜನರ ಬೆಂಬಲಿಗರ ಪ್ರೋತ್ಸಾಹದ ನೆರವಿನಿಂದ 26 ಮೈಲು ದೂರವನ್ನು ಏಳು ಗಂಟೆ, 24 ನಿಮಿಷ ಹಾಗೂ 36 ಸೆಕೆಂಡ್‌ನಲ್ಲಿ ಕ್ರಮಿಸಿ ಹೊಸ ದಾಖಲೆ ಬರೆದರು ಎಂದು ಆಯೋಜಕರು ತಿಳಿಸಿದ್ದಾರೆ.

‘‘ಒಂದು ಹಂತದಲ್ಲಿ ನನಗೆ ತುಂಬಾ ಆಯಾಸವಾಗಿತ್ತು. ನನ್ನ ಈ ವಯಸ್ಸಿಗೆ ಇದೊಂದು ರೋಮಾಂಚನ ಉಂಟುಮಾಡಿತು. ನನ್ನ ಮಗ ಕಾರ್ಬೊಹೈಡ್ರೇಟ್ ತಿನ್ನಿಸಿದ ಕಾರಣ ನನಗೆ ಓಡಲು ಸಾಧ್ಯವಾಯಿತು’’ ಎಂದು ಥಾಂಪ್ಸನ್ ಸಂತಸ ವ್ಯಕ್ತಪಡಿಸಿದರು. 2010ರಲ್ಲಿ ಅಮೆರಿಕದ ಗ್ಲಾಡಿಸ್ ಬರ್ರಿಲ್ ಎಂಬ 92 ರ ಹರೆಯದ ಮಹಿಳೆ ಮ್ಯಾರಥಾನ್‌ನಲ್ಲಿ ಓಡಿ ದಾಖಲೆ ಬರೆದಿದ್ದರು. 10 ಮೊಮ್ಮಕ್ಕಳನ್ನು ಹೊಂದಿರುವ ಥಾಂಪ್ಸನ್ ಕಳೆದ ವರ್ಷ 7 ಗಂಟೆ, 7 ನಿಮಿಷ ಹಾಗೂ 42 ಸೆಕೆಂಡ್‌ನಲ್ಲಿ ಮ್ಯಾರಥಾನ್ ಓಟವನ್ನು ಪೂರೈಸಿದ್ದರು. 101ರ ಹರೆಯದ ಭಾರತದ ಸಂಜಾತ ಇಂಗ್ಲೆಂಡ್‌ನ ಫೌಜಾ ಸಿಂಗ್ ವಿಶ್ವದ ಹಿರಿಯ ಮ್ಯಾರಥಾನ್ ಓಟಗಾರನಾಗಿದ್ದಾರೆ.

Write A Comment