ಮನೋರಂಜನೆ

ನರ್ಗೀಸ್ ದತ್ ಜನ್ಮದಿನ ಪ್ರಯುಕ್ತ ಗೂಗಲ್ ಡೂಡಲ್

Pinterest LinkedIn Tumblr

nargis-dutt

ಬಾಲಿವುಡ್ ನ ಅಪ್ರತಿಮ ಚೆಲುವೆ ನಟಿ ದಿವಂಗತ ನರ್ಗೀಸ್ ದತ್ ಗೆ ಇಂದು 86 ನೇ ಹುಟ್ಟು ಹಬ್ಬ. ಹಿರಿಯ ನಟಿಗಾಗಿ ಗೂಗಲ್ ಸೆರ್ಚ್ ನಲ್ಲಿ ನಟಿ ನರ್ಗೀಸ್ ರೇಖಾ ಚಿತ್ರ ಹಾಕುವ ಮೂಲಕ ಗೌರವ ಸಲ್ಲಿಸಿದೆ. ಎರಡು ಕೈಯ್ಯಲ್ಲಿ ದುಪ್ಪಟ್ಟದ ಎರಡು ತುದಿಗಳನ್ನು ಹಿಡಿದು ನಿಂತಿರುವ ನರ್ಗೀಸ್ ರೇಖಾ ಚಿತ್ರವನ್ನು ಗೂಗಲ್ ಇಂದು ತನ್ನ ಲೋಗೋ ವಾಗಿ ಹಾಕಿಕೊಂಡಿದೆ.

ಬಾಲನಟಿಯಾಗಿ ಬಾಲಿವುಡ್ ಗೆ ಎಂಟ್ರಿಕೊಟ್ಟ ನರ್ಗೀಸ್ ಮೊದಲ ಹೆಸರು ಫಾತಿಮಾ ರಶೀದ್. ಜೂನ್ 1, 1929 ರಲ್ಲಿ ಜನಿಸಿದ ನರ್ಗೀಸ್ ತಲಾಶ್ – ಇ- ಹಖ್ ಎಂಬ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. 1942 ರಲ್ಲಿ ನರ್ಗೀಸ್ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದರು.

1940 ರಿಂದ 1960 ರವರೆಗೆ ಸುಮಾರು 2 ದಶಕಗಳ ಕಾಲ ಬಾಲಿವುಡ್ ಸಿನಿ ರಸಿಕರನ್ನು ತನ್ನ ಮನೋಜ್ಞ ಅಭಿನಯದಿಂದ ರಂಜಿಸಿದ ನರ್ಗೀಸ್ ಮದರ್ ಇಂಡಿಯಾ ಚಿತ್ರದಲ್ಲಿ ತಮ್ಮ ಸಹನಟನಾಗಿ ನಟಿಸಿದ ಸುನೀಲ್ ಜೊತೆ 1958 ರಲ್ಲಿ ವಿವಾಹವಾಗಿ ಚಿತ್ರರಂಗದಿಂದ ದೂರ ಸರಿದರು.  ನಂತರ 1967 ರಲ್ಲಿ ನಟಿಸಿದ ರಾತ್ ಔರ್ ದಿನ್ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ನರ್ಗೀಸ್ ದತ್ 1981 ರಲ್ಲಿ ಸಾವನ್ನಪ್ಪಿದರು.

ನರ್ಗೀಸ್  ಸ್ಮರಣಾರ್ಥ 1982 ರಲ್ಲಿ ನರ್ಗೀಸ್ ದತ್ ಸ್ಮಾರಕ ಕ್ಯಾನ್ಸರ್ ಫೌಂಡೇಶನ್ ಸ್ಥಾಪಿಸಲಾಯ್ತು.

Write A Comment