ಮನೋರಂಜನೆ

ಬಯೋಗ್ರಫಿ ಬರೆಯಲು ಸಿದ್ಧತೆ ನಡೆಸುತ್ತಿದ್ದಾರಂತೆ ವಿದ್ಯಾಬಾಲನ್

Pinterest LinkedIn Tumblr

Vidya-Balan

ಡರ್ಟಿ ಗರ್ಲ್ ವಿದ್ಯಾ ಬಾಲನ್ ಈಗ ತನ್ನ `ಕಹಾನಿ’ ಹೇಳಲು ಹೊರಟಿದ್ದಾಳೆ. ಡರ್ಟಿ ಪಿಕ್ಚರ್, ಪರಿಣೀತಾ, ನೋವನ್ ಕಿಲ್ಲ್‍ಡ್ ಜೆಸ್ಸಿಕಾ, ಹಮಾರಿ  ಅಧೂರಿ ಕಹಾನಿಯಂಥ ವೈವಿಧ್ಯಮಯ ಚಿತ್ರಗಳಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದ ಈ ಕೇರಳದ ಚೆಲುವೆ ತನ್ನ ಜೀವನದ ಕತೆಯನ್ನು ಹೇಳುತ್ತಾಳಂತೆ.

ಜನಪ್ರಿಯ ಪ್ರಕಾಶನ ಸಂಸ್ಥೆಯೊಂದು ಈ ವಿಷಯಕ್ಕಾಗಿ ವಿದ್ಯಾಳನ್ನು ಸಂಪರ್ಕಿಸಿದ್ದು, ಅವಳಿಗೂ ಏಕಾಗಬಾರದು ಎನಿಸಿದೆಯಂತೆ. ಅಂದ ಮೇಲೆ  ಸದ್ಯದಲ್ಲೇ ಬಾಲ್‍ಪೆನ್ ಹಿಡಿದು ಕೂರಲಿದ್ದಾಳೆ ಬಾಲನ್. ಯಾರದೋ ಕತೆಗೆ ನಟಿಸುವವರು ತಮ್ಮದೇ ಕತೆ ಹೇಳುತ್ತಾರೆಂದರೆ ಕುತೂಹಲ ಹೆಚ್ಚೇ ಅಲ್ಲವೇ?

Write A Comment