ಮನೋರಂಜನೆ

ಮದುವೆಯಾಗುತ್ತಿದ್ದಾರಂತೆ ಕ್ರಿಸ್ ಗೇಲ್

Pinterest LinkedIn Tumblr

gri

ಮುಂಬೈ: ಐಪಿಎಲ್‍ ಮೂಲಕ ಭಾರತದಲ್ಲೂ ಜನಪ್ರಿಯರಾಗಿರುವ ವೆಸ್ಟ್ ಇಂಡಿಸ್‌ನ ಸ್ಪೋಟಕ ಬ್ಯಾಟ್ಸಮನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೆನ್ನೆಲುಬು ಎಂದು ಗುರುತಿಸಿಕೊಳ್ಳುವ ಕ್ರಿಸ್ ಗೇಲ್ ಸದ್ಯದಲ್ಲೇ ಮದುವೆಯಾಗುತ್ತಿದ್ದಾರಂತೆ.

ಐಪಿಎಲ್‌ನಲ್ಲಿ ತಮ್ಮ ಭರ್ಜರಿ ಆಟದ ಮೂಲಕ ಸುದ್ದಿ ಮಾಡಿರುವ ಮುಂಬೈನ 17ರ ಹರೆಯದ ಬಾಲಕ ಸರ್ಫರಾಜ್ ಖಾನ್ ಈ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ

ಮಾಧ್ಯಮವೊಂದರ ಜತೆ ಮಾತನಾಡುತ್ತಿದ್ದ ಸರ್ಫರಾಜ್ ತಮ್ಮ ಸ್ನೇಹದ ಬಗ್ಗೆ ಬಹಳಷ್ಟನ್ನು ಹೇಳಿಕೊಂಡಿದ್ದಾರೆ. ಜೂನ್ ತಿಂಗಳಿನಲ್ಲಿ ಗೇಲ್ ಅದ್ದೂರಿಯಾಗಿ ಜಮೈಕಾದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಕ್ರಿಸ್ ಗೇಲ್ ನನ್ನ ಜತೆ ಬಹಳ ಆತ್ಮೀಯರಾಗಿದ್ದು  ಮದುವೆಗೆ ನನ್ನನ್ನು ಆಹ್ವಾನಿಸಿದ್ದಾರೆ ಎಂದು ರಾಜ್ ಹೇಳಿದ್ದಾರೆ.

ಮುಂದಿನ ತಿಂಗಳು ಗೇಲ್ ಮದುವೆ ಎಂಬುದು ಖಚಿತವಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ಮದುವೆಗೆ ತನ್ನನ್ನು ಆಹ್ವಾನಿಸಿರುವುದಕ್ಕೆ ಸರ್ಫರಾಜ್  ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ತಾವು ಮದುವೆಗೆ ಹೋಗುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.

Write A Comment