ರಾಷ್ಟ್ರೀಯ

ಈಗ ನೇರವಾಗಿ ಮೋದಿಗೆ ಇಮೇಲ್ ಕಳುಹಿಸಿ!

Pinterest LinkedIn Tumblr

mooo

ನವದೆಹಲಿ: ಬಿಜೆಪಿ ನೇತೃತ್ವದ ಸರಕಾರಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಕಚೇರಿಯ ವೈಬ್ಸೈಟ್‌ನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದ್ದು ಮೊದಲಿನಗಿಂತಲೂ ಹೆಚ್ಚು ಬಳಕೆದಾರರ ಸ್ನೇಹಿ ಮತ್ತು ಕ್ರಿಯಾಶೀಲಗೊಳಿಸಲಾಗಿದೆ.
ವರದಿಗಳ ಪ್ರಕಾರ ವೆಬ್ಸೈಟ್‌ನ ಹೊಸ ನೋಟ ನರೇಂದ್ರ ಮೋದಿ ಸರಕಾರದ ಮೊದಲ ವಾರ್ಷಿಕೋತ್ಸವದ ಗುರುತಿಗಾಗಿ ಮಂಗಳವಾರ ಅನಾವರಣಗೊಳಿಸಲಾಯಿತು.
ಬದಲಾವಣೆಯನ್ನು ಖಚಿತಪಡಿಸಲು ಪ್ರಧಾನಿ ಮೋದಿ ಟ್ವಿಟರ್ ಪ್ರಕಟಿಸಿದರು.

ಪ್ರಧಾನಿ ಮೋದಿಯವರಿಗೆ ನೇರವಾಗಿ ಇ ಮೇಲ್ ಕಳುಹಿಸಬಹುದಾದ ಅವಕಾಶ ಕೂಡ ಈ ಹೊಸ ವೈಬ್ಸೈಟ್‌ನಲ್ಲಿದೆ.

ಲಾಗಿನ್ / ರಿಜಿಸ್ಟರ್/ ಲೊಸ್ಟ್ ಪಾಸ್ವರ್ಡ್ / ರಿಸೆಂಡ್ ಎಕ್ಟಿವೇಶನ್ ಮೇಲ್ ‘ ಎಂಬ ಆಯ್ಕೆಯನ್ನು ನೀಡುವ ಮೂಲಕ ವೈಬ್ಸೈಟ್ “ಪ್ರಧಾನಿಗೆ ಬರೆಯಿರಿ,” ಎಂದು ತೋರಿಸುತ್ತದೆ.

ವೆಬ್ಸೈಟ್, ‘ನಮ್ಮ ಸರಕಾರ’ ಎಂಬ ವಿಬಾಗವನ್ನು ಹೊಂದಿದ್ದು, ಅದರಡಿಯಲ್ಲಿ, ಭಾರತದ ರಾಷ್ಟ್ರಪತಿ,ಲೋಕಸಭೆ, ರಾಜ್ಯಸಭೆ,  ಸಂಪುಟ ಸಚಿವಾಲಯ, ಪ್ರೆಸ್ ಇನ್ಫರ್ಮೇಷನ್ ಬ್ಯೂರೊ, ಡೇಟಾ. ಗವರ್ನಮೆಂಟ್, ಇಂಡಿಯಾ.ಗವರ್ನಮೆಂಟ್. ಇನ್, ಗವರ್ನಮೆಂಟ್ ಆಫ್ ಇಂಡಿಯಾ ವೆಬ್ ಡೈರೆಕ್ಟರಿ ಮತ್ತು ಮೈ ಗವರ್ನಮೆಂಟ್ ಎಂಬ ಉಪ ವಿಭಾಗಗಳಿವೆ.

ವೆಬ್ಸೈಟ್ ಇತ್ತೀಚಿನ ವರದಿಗಳು, ಪ್ರಧಾನಿ ಫೋಟೋಗಳು, ಅವರ ಉಲ್ಲೇಖಗಳು, ಭಾಷಣಗಳ ಪೂರ್ಣ ಪಠ್ಯವನ್ನು ತೋರಿಸುತ್ತದೆ.

ನರೇಂದ್ರ ಮೋದಿ 2014 ರಲ್ಲಿ ಪ್ರಧಾನಿ ಹುದ್ದೆ ವಹಿಸಿಕೊಂಡ ತಕ್ಷಣ, ಪ್ರಧಾನ ಮಂತ್ರಿ ಸಚಿವಾಲಯದ ವೆಬ್ಸೈಟ್‌ನ ನೋಟ ಮತ್ತು ಸ್ವರೂಪವನ್ನು ಸಾಮಾಜಿಕ ಮಾಧ್ಯಮದ ಸಂಯೋಜನೆಯೊಂದಿಗೆ ಸಂಪೂರ್ಣವಾಗಿ ಬದಲಾಯಿಸಲಾಗಿದೆ.

Write A Comment