ಮನೋರಂಜನೆ

24ರ ವಸಂತಕ್ಕೆ ಕಾಲಿಟ್ಟ ರಾಗಿಣಿ

Pinterest LinkedIn Tumblr

ರ಻ಗಿನಿ

– ಕ. ವೀರೇಶ್

ಪಂಜಾಬಿ ಕುಟುಂಬದ ಹಿನ್ನೆಲೆ ಇದ್ದರೂ ಕನ್ನಡತಿಯಾಗಿಯೇ ಗುರುತಿಸಿಕೊಳ್ಳತೊಡಗಿರುವ ರಾಗಿಣಿ ದ್ವಿವೇದಿ ಇಂದು 24ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೆಲ ಕಾಲ ಗ್ಲಾಮರ್ ಗೊಂಬೆಯಾಗಿ ಎದ್ದುಕಂಡ ಅವರಿಗೆ ‘ರಾಗಿಣಿ ಐಪಿಎಸ್’, ‘ನಮಸ್ತೆ ಮೇಡಮ್ ಬಳಿಕ ಒನ್ ವುಮನ್ ಶೋ ಮಾದರಿಯ ಚಿತ್ರಗಳೇ ಸಿಗುತ್ತಿವೆ. ‘ರಣಚಂಡಿ’, ‘ಅಮ್ಮ’ ಬಿಡುಗಡೆಗೆ ಸಿದ್ಧವಾಗಿದ್ದರೆ, ‘ರಾಗಿಣಿ ಸೂಪರ್ ಸ್ಟಾರ್’, ‘ಲೇಡಿ ಸಿಂಘಂ’ ಘೊಷಣೆಗೊಂಡಿವೆ. ಇವೆಲ್ಲದರ ಜತೆ ‘ನಾನೇ’ ಎಂದು ಕುರ್ಚಿ ಮೇಲೆ ಕುಳಿತು ಗತ್ತು ಪ್ರದರ್ಶಿಸುತ್ತಿದ್ದಾರೆ ರಾಗಿಣಿ. ‘ನೆಕ್ಸ್ಟ್ ಸಿಎಂ’ ಅನ್ನುವುದು ಈ ಚಿತ್ರದ ಅಡಿಬರಹ! ಈ ಹಿನ್ನೆಲೆಯಲ್ಲಿ ಹೀಗೊಂದು ‘ಉಲ್ಲಾಸ’ಮಯ ಫಟಾಫಟ್ ಮಾತು…

***

* 24ನೇ ತಾರೀಖಿನಂದೇ 24ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೀರಿ. ಹೇಗಿದೆ ಫೀಲ್? ಏನು ವಿಶೇಷ?

-ತುಂಬಾನೆ ವಿಶೇಷ!! ಇದೇ ಮೊದಲ ಬಾರಿಗೆ ನನ್ನ ಅಭಿಮಾನಿ ಸಂಘ ಹುಟ್ಟುಹಬ್ಬ ಆಚರಣೆಯ ಹೊಣೆ ಹೊತ್ತುಕೊಂಡಿದೆ. ಅದರ ಮೂಲಕ ಕೈಲಾದಷ್ಟು ಸಮಾಜೋಪಕಾರಿ ಕೆಲಸಗಳನ್ನು ಮಾಡೋಣ ಅಂದುಕೊಂಡಿದ್ದೇನೆ. ನಮ್ಮಿಂದ ಯಾರಿಗಾದರೂ ಒಳ್ಳೆಯದಾದರೆ, ಅದಕ್ಕಿಂತ ಬೇರೆ ಭಾಗ್ಯ ಇನ್ನೇನಿದೆ?! ನನ್ನ ಮಟ್ಟಿಗಂತೂ ಒಳ್ಳೆಯ ವರ್ಷ. ಇನ್ನೊಂದೇನು ಗೊತ್ತಾ? ಕಳೆದ ತಿಂಗಳು 24ಕ್ಕೆ ಅಣ್ಣಾವ್ರ (ಡಾ. ರಾಜ್) ಹುಟ್ಟುಹಬ್ಬ ಇತ್ತು – ಅಂತ ಅಭಿಮಾನಿಗಳು ನೆನಪಿಸಿದಾಗ ಹೆಮ್ಮೆಯಾಗುತ್ತೆ. ಈ ವರ್ಷ 2024 ಆಗಿರಬೇಕಿತ್ತು… ಖುಷಿಯಲ್ಲಿ ನಾನು ಎಲ್ಲೋ ಇರ್ತಿದ್ದೆ! 24-24-24 ಅಂಕಿಗಳು ಮಜವಾಗಿರ್ತಿತ್ತು ಅಲ್ವಾ?!

* ಮುಂದಿನ ಸಿಎಂ ಆಗ್ತಿದ್ದೀರಂತೆ?

-ಹ್ಹಹ್ಹಹ್ಹ…!!! ನಾವೇನಿದ್ದರೂ ಸಿನಿಮಾದಲ್ಲಿ ಅಷ್ಟೇ! ‘ನಾನೇ’ ಸಿಕ್ಕಾಪಟ್ಟೆ ವಿಭಿನ್ನ ಚಿತ್ರಕಥೆ. ಇಲ್ಲಿ ‘ನಾನೇ’ ಅನ್ನೋದು ಒಬ್ಬ ವ್ಯಕ್ತಿಯ ಶಕ್ತಿಯನ್ನು ಸೂಚಿಸುವ ಪದ. ಆ ವ್ಯಕ್ತಿ ಕಾಮನ್ ಮ್ಯಾನ್. ಶ್ರೀಸಾಮಾನ್ಯರು ಸಾಮಾನ್ಯವಾಗಿ ವ್ಯವಸ್ಥೆ ಮೇಲೆ, ಸರ್ಕಾರದ ಮೇಲೆ, ತಮ್ಮ ಉದ್ಯೋಗದ ಮೇಲೆ ಅವಲಂಬಿತ ರಾಗಿರುತ್ತಾರೆ. ಆದರೆ ತಮ್ಮ ಶಕ್ತಿಯನ್ನು ತಿಳಿದುಕೊಂಡರೆ ಎಂಥ ಸಾಧನೆಯನ್ನು ಬೇಕಾದರೂ ಮಾಡಬಹುದು ಅನ್ನೋದು ಕಥೆಯ ತಿರುಳು. ನಿರ್ದೇಶಕ ಮುಸ್ಸಂಜೆ ಮಹೇಶ್ ಒಳ್ಳೆಯ ತಯಾರಿ ಮಾಡಿಕೊಂಡಿದ್ದಾರೆ. ಇದು ಬಿಟ್ಟರೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಹರಿವು’ ತಂಡದೊಂದಿಗೂ ಚಿತ್ರವೊಂದನ್ನು ಒಪ್ಪಿಕೊಂಡಿದ್ದೇನೆ. ರವಿಚಂದ್ರನ್ ಜತೆ ‘ಶೃಂಗಾರ’ ಪ್ರಾಜೆಕ್ಟ್ ಡ್ರಾಪ್ ಆಯಿತಲ್ಲ, ಅದರ ನಿರ್ವಪಕ ಶಂಕರ್ ಅವರ ಚಿತ್ರದಲ್ಲೂ ನಟಿಸಲಿದ್ದೇನೆ.

* ಕನ್ನಡದಲ್ಲೀಗ ಮಾಲಾಶ್ರೀ ಮಾದರಿಯಲ್ಲಿ ನಿಮ್ಮದೇ ಇಮೇಜ್ ಸೃಷ್ಟಿಯಾಗಿದೆ. ನಿಮಗೂ ಇದು ಇಷ್ಟವೇ?

-ಆ ತರಹ ಏನಿಲ್ಲ. ಕನ್ನಡಕ್ಕೊಬ್ಬರೇ ಮಾಲಾಶ್ರೀ! ಅವರಂತೆ ಆಗೋಕೆ ನನಗಷ್ಟೇ ಅಲ್ಲ, ಇನ್ನ್ಯಾರಿಗೂ ಸಾಧ್ಯವಿಲ್ಲ. ಮಾಲಾಶ್ರೀ ನನಗೆ ಸ್ಪೂರ್ತಿ. ನಟಿಯಾಗಿ ಅವರ ಬಳಿ ಸಲಹೆ-ಸೂಚನೆಗಳನ್ನು ಪಡೆಯುತ್ತಲೇ ಇರುತ್ತೇನೆ. ಚಿತ್ರರಂಗದಲ್ಲಿ ನಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಳ್ಳುವುದು ಬಹಳ ದೊಡ್ಡ ವಿಷಯ. ಮಾಲಾಶ್ರೀ ಈಗಲೂ ತಮ್ಮ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ. ಅವರ ಇಮೇಜ್ ಅವರಿಗೆ ಮಾತ್ರ. ನನ್ನ ದಾರಿಯೇ ಬೇರೆ. ನಮ್ಮಿಬ್ಬರ ಮಧ್ಯೆ ಹೋಲಿಕೆಯೇ ಸರಿಯಲ್ಲ.

* ಮಹಿಳಾಪ್ರಧಾನ ಚಿತ್ರಗಳಲ್ಲಿ, ನೀವೊಬ್ಬರೇ ಹೈಲೈಟ್ ಆಗುವಂಥ ಚಿತ್ರಗಳಲ್ಲಿ ಜಾಸ್ತಿ ನಟಿಸುತ್ತಿದ್ದೀರಲ್ಲ?

-ಕಲಾವಿದೆಯಾಗಿ ಒಳ್ಳೆಯ ಕಥೆಯೇ ನನ್ನ ಮೊತ್ತಮೊದಲ ಹಾಗೂ ಕಟ್ಟಕಡೆಯ ಆದ್ಯತೆ. ಅದಾದ ಬಳಿಕ, ಕಮರ್ಷಿಯಲ್ ಆಗಿ ಎಲ್ಲರಿಗೂ ಮುಟ್ಟಬೇಕು ಅನ್ನುವ ಕಾಳಜಿ. ಅದೂ ಅಲ್ಲದೇ, ಒಂದು ಚಿತ್ರದಲ್ಲಿ ನನ್ನದೇ ಕೇಂದ್ರ ಪಾತ್ರ ಅಂದರೆ ಯಾವ ನಟಿಗೆ ತಾನೇ ಖುಷಿಯಾಗುವುದಿಲ್ಲ?! ಆ ಖುಷಿ ನನಗಿದೆ ಅಷ್ಟೇ.

* ನಿಜವಾಗಿಯೂ ನೀವು ಸಿಎಂ ಆಗಿಬಿಟ್ಟರೆ, ಮೊದಲಿಗೆ ಮಾಡೋಕೆ ಇಷ್ಟಪಡುವ ಕೆಲಸವೇನು?

-ನಮ್ಮ ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಯುವಜನತೆ ಇದ್ದಾರೆ. ಹೀಗಾಗಿ ನನ್ನ ಸರ್ಕಾರದಲ್ಲಿ ಅವರಿಗೆ ಹೆಚ್ಚಿನ ಪ್ರಾಶಸ್ಱ ಇರುತ್ತೆ. ಯುವಜನತೆಯ ಅಭಿವೃದ್ಧಿಪರ ವಿಚಾರಗಳನ್ನು ಅನುಷ್ಠಾನಕ್ಕೆ ತರ್ತೀನಿ. ಎಲ್ಲಕ್ಕಿಂತ ಹೆಚ್ಚಾಗಿ, ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಹೆಜ್ಜೆ ಇಡುತ್ತೇನೆ; ಕಠಿಣ ಕಾನೂನು ಬರುವಂತೆ ಶ್ರಮಿಸುತ್ತೇನೆ. ಪ್ರಜೆಗಳ ನೆಮ್ಮದಿಯಿಂದಿದ್ದರೆ ಸರ್ಕಾರಕ್ಕೂ ನೆಮ್ಮದಿ.

* 24ನೇ ತಾರೀಖಿನಂದೇ 24ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೀರಿ. ಹೇಗಿದೆ ಫೀಲ್? ಏನು ವಿಶೇಷ?

-ತುಂಬಾನೆ ವಿಶೇಷ!! ಇದೇ ಮೊದಲ ಬಾರಿಗೆ ನನ್ನ ಅಭಿಮಾನಿ ಸಂಘ ಹುಟ್ಟುಹಬ್ಬ ಆಚರಣೆಯ ಹೊಣೆ ಹೊತ್ತುಕೊಂಡಿದೆ. ಅದರ ಮೂಲಕ ಕೈಲಾದಷ್ಟು ಸಮಾಜೋಪಕಾರಿ ಕೆಲಸಗಳನ್ನು ಮಾಡೋಣ ಅಂದುಕೊಂಡಿದ್ದೇನೆ. ನಮ್ಮಿಂದ ಯಾರಿಗಾದರೂ ಒಳ್ಳೆಯದಾದರೆ, ಅದಕ್ಕಿಂತ ಬೇರೆ ಭಾಗ್ಯ ಇನ್ನೇನಿದೆ?! ನನ್ನ ಮಟ್ಟಿಗಂತೂ ಒಳ್ಳೆಯ ವರ್ಷ. ಇನ್ನೊಂದೇನು ಗೊತ್ತಾ? ಕಳೆದ ತಿಂಗಳು 24ಕ್ಕೆ ಅಣ್ಣಾವ್ರ (ಡಾ. ರಾಜ್) ಹುಟ್ಟುಹಬ್ಬ ಇತ್ತು – ಅಂತ ಅಭಿಮಾನಿಗಳು ನೆನಪಿಸಿದಾಗ ಹೆಮ್ಮೆಯಾಗುತ್ತೆ. ಈ ವರ್ಷ 2024 ಆಗಿರಬೇಕಿತ್ತು… ಖುಷಿಯಲ್ಲಿ ನಾನು ಎಲ್ಲೋ ಇರ್ತಿದ್ದೆ! 24-24-24 ಅಂಕಿಗಳು ಮಜವಾಗಿರ್ತಿತ್ತು ಅಲ್ವಾ?!

* ಮುಂದಿನ ಸಿಎಂ ಆಗ್ತಿದ್ದೀರಂತೆ?

-ಹ್ಹಹ್ಹಹ್ಹ…!!! ನಾವೇನಿದ್ದರೂ ಸಿನಿಮಾದಲ್ಲಿ ಅಷ್ಟೇ! ‘ನಾನೇ’ ಸಿಕ್ಕಾಪಟ್ಟೆ ವಿಭಿನ್ನ ಚಿತ್ರಕಥೆ. ಇಲ್ಲಿ ‘ನಾನೇ’ ಅನ್ನೋದು ಒಬ್ಬ ವ್ಯಕ್ತಿಯ ಶಕ್ತಿಯನ್ನು ಸೂಚಿಸುವ ಪದ. ಆ ವ್ಯಕ್ತಿ ಕಾಮನ್ ಮ್ಯಾನ್. ಶ್ರೀಸಾಮಾನ್ಯರು ಸಾಮಾನ್ಯವಾಗಿ ವ್ಯವಸ್ಥೆ ಮೇಲೆ, ಸರ್ಕಾರದ ಮೇಲೆ, ತಮ್ಮ ಉದ್ಯೋಗದ ಮೇಲೆ ಅವಲಂಬಿತ ರಾಗಿರುತ್ತಾರೆ. ಆದರೆ ತಮ್ಮ ಶಕ್ತಿಯನ್ನು ತಿಳಿದುಕೊಂಡರೆ ಎಂಥ ಸಾಧನೆಯನ್ನು ಬೇಕಾದರೂ ಮಾಡಬಹುದು ಅನ್ನೋದು ಕಥೆಯ ತಿರುಳು. ನಿರ್ದೇಶಕ ಮುಸ್ಸಂಜೆ ಮಹೇಶ್ ಒಳ್ಳೆಯ ತಯಾರಿ ಮಾಡಿಕೊಂಡಿದ್ದಾರೆ. ಇದು ಬಿಟ್ಟರೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಹರಿವು’ ತಂಡದೊಂದಿಗೂ ಚಿತ್ರವೊಂದನ್ನು ಒಪ್ಪಿಕೊಂಡಿದ್ದೇನೆ. ರವಿಚಂದ್ರನ್ ಜತೆ ‘ಶೃಂಗಾರ’ ಪ್ರಾಜೆಕ್ಟ್ ಡ್ರಾಪ್ ಆಯಿತಲ್ಲ, ಅದರ ನಿರ್ವಪಕ ಶಂಕರ್ ಅವರ ಚಿತ್ರದಲ್ಲೂ ನಟಿಸಲಿದ್ದೇನೆ.

* ಕನ್ನಡದಲ್ಲೀಗ ಮಾಲಾಶ್ರೀ ಮಾದರಿಯಲ್ಲಿ ನಿಮ್ಮದೇ ಇಮೇಜ್ ಸೃಷ್ಟಿಯಾಗಿದೆ. ನಿಮಗೂ ಇದು ಇಷ್ಟವೇ?

-ಆ ತರಹ ಏನಿಲ್ಲ. ಕನ್ನಡಕ್ಕೊಬ್ಬರೇ ಮಾಲಾಶ್ರೀ! ಅವರಂತೆ ಆಗೋಕೆ ನನಗಷ್ಟೇ ಅಲ್ಲ, ಇನ್ನ್ಯಾರಿಗೂ ಸಾಧ್ಯವಿಲ್ಲ. ಮಾಲಾಶ್ರೀ ನನಗೆ ಸ್ಪೂರ್ತಿ. ನಟಿಯಾಗಿ ಅವರ ಬಳಿ ಸಲಹೆ-ಸೂಚನೆಗಳನ್ನು ಪಡೆಯುತ್ತಲೇ ಇರುತ್ತೇನೆ. ಚಿತ್ರರಂಗದಲ್ಲಿ ನಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಳ್ಳುವುದು ಬಹಳ ದೊಡ್ಡ ವಿಷಯ. ಮಾಲಾಶ್ರೀ ಈಗಲೂ ತಮ್ಮ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ. ಅವರ ಇಮೇಜ್ ಅವರಿಗೆ ಮಾತ್ರ. ನನ್ನ ದಾರಿಯೇ ಬೇರೆ. ನಮ್ಮಿಬ್ಬರ ಮಧ್ಯೆ ಹೋಲಿಕೆಯೇ ಸರಿಯಲ್ಲ.

* ಮಹಿಳಾಪ್ರಧಾನ ಚಿತ್ರಗಳಲ್ಲಿ, ನೀವೊಬ್ಬರೇ ಹೈಲೈಟ್ ಆಗುವಂಥ ಚಿತ್ರಗಳಲ್ಲಿ ಜಾಸ್ತಿ ನಟಿಸುತ್ತಿದ್ದೀರಲ್ಲ?

-ಕಲಾವಿದೆಯಾಗಿ ಒಳ್ಳೆಯ ಕಥೆಯೇ ನನ್ನ ಮೊತ್ತಮೊದಲ ಹಾಗೂ ಕಟ್ಟಕಡೆಯ ಆದ್ಯತೆ. ಅದಾದ ಬಳಿಕ, ಕಮರ್ಷಿಯಲ್ ಆಗಿ ಎಲ್ಲರಿಗೂ ಮುಟ್ಟಬೇಕು ಅನ್ನುವ ಕಾಳಜಿ. ಅದೂ ಅಲ್ಲದೇ, ಒಂದು ಚಿತ್ರದಲ್ಲಿ ನನ್ನದೇ ಕೇಂದ್ರ ಪಾತ್ರ ಅಂದರೆ ಯಾವ ನಟಿಗೆ ತಾನೇ ಖುಷಿಯಾಗುವುದಿಲ್ಲ?! ಆ ಖುಷಿ ನನಗಿದೆ ಅಷ್ಟೇ.

Write A Comment