ಮನೋರಂಜನೆ

ಒಂದಾದ ಮೇಲೊಂದರಂತೆ ‘ಧಮ್’ ಎಳೆದ ಈ ನಟಿ !

Pinterest LinkedIn Tumblr

3463Eradondla Mooru

ಕನ್ನಡದ ಯುವ ನಟಿಯೊಬ್ಬಳು ಒಂದಾದ ಮೇಲೊಂದರಂತೆ ಸ್ಮೋಕ್ ಮಾಡಿ ಅಚ್ಚರಿಗೆ ಕಾರಣಳಾಗಿದ್ದಾಳೆ.

ಹೌದು. ಯೋಗರಾಜ್ ಭಟ್ ನಿರ್ದೇಶನದ ಪರಮಾತ್ಮ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಶ್ವೇತಾ ಪಂಡಿತ್ ಇದೀಗ ಪಡ್ಡೆ ಹುಡುಗರೂ ಬೆರಗಾಗುವಂತೆ ಧಮ್ ಎಳೆದಿದ್ದು ಅಚ್ಚರಿ ಮೂಡಿಸಿದೆ.

ಅಂದಹಾಗೆ ಇದು ರೀಯಲ್ ನಲ್ಲಿ ಅಲ್ಲ, ಬದಲಾಗಿ `ಎರಡೊಂದ್ಲಾ ಮೂರು’ ಚಿತ್ರದಲ್ಲಿ . ಈ ಚಿತ್ರಕ್ಕಾಗಿಯೇ  ಐದು ಕೆಜಿ ತೂಕವನ್ನು ಇಳಿಸಿಕೊಂಡು ಸ್ಲಿಮ್ ಆಗಿರುವ ಶ್ವೇತಾ ಅಭಿನಯದಲ್ಲಿಯೂ ಸಾಕಷ್ಟು ಮಿಂಚಿದ್ದಾಳಂತೆ. ಈ ಪಾತ್ರದ ಅನಿವಾರ್ಯತೆಗಾಗಿ ಬಾಲಿವುಡ್ ನಟಿಯರ ಸ್ಮೋಕಿಂಗ್ ಸ್ಟೈಲ್‍ನ್ನು ನಾನು ಅನುಕರಣೆ ಮಾಡಿದ ಕಾರಣ ಇಷ್ಟು ಒಳ್ಳೆಯ ಅಭಿಪ್ರಾಯ ಮೂಡಿದೆ ಎಂದಿರುವ ಶ್ವೇತಾ ಚಿತ್ರವನ್ನು ನೋಡಿ ಮಾತನಾಡಿ ಎಂದಿದ್ದಾಳೆ.

ವಿಶೇಷವೆಂದರೆ ಈ ಚಿತ್ರದಲ್ಲಿ ಕಿರುತೆರೆಯ ರಿಯಾಲಿಟಿ ಶೋಗಳಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದ ಕುಮಾರ್ ದತ್ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದು ಕಿರುತೆರೆ ನಟ ಚಂದನ್‍ಗೆ ಇಬ್ಬರು ನಾಯಕಿಯರಿದ್ದು  ಎ.ಎಮ್.ನೀಲ್ ಸಂಗೀತ ನೀಡಿದ್ದಾರೆ. ಹಾಗಾಗಿ ಈ ಚಿತ್ರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಯಶಸ್ಸು ಕಾಣುತ್ತದಾ ಎಂಬುದನ್ನು ಕಾಯ್ದು ನೋಡಬೇಕಿದೆ.

Write A Comment