International

ಪ್ರಸಿದ್ದಿಯಲ್ಲಿಯೂ ಗಿನ್ನಿಸ್ ದಾಖಲೆ ನಿರ್ಮಿಸಿದ ಒಬಾಮಾ

Pinterest LinkedIn Tumblr

5212obama-twitter2-hed-2015

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ವಿಶ್ವದಾಖಲೆ ನಿರ್ವಿುಸಿದ್ದು ತಾವೆಷ್ಟು ಜನಪ್ರಿಯ ಎಂಬುದನ್ನು ವಿಶ್ವದೆದುರು ಸಾಬೀತು ಪಡಿಸಿದ್ದಾರೆ.

ಇತ್ತೀಚೆಗಷ್ಟೇ ಹೊಸದೊಂದು ಟ್ವಿಟ್ಟರ್ ಖಾತೆ ತೆರೆದಿರುವ ಒಬಾಮ, ಕೇವಲ ಐದು ಗಂಟೆಗಳ ಅವಧಿಯಲ್ಲಿ ಒಂದು ಕೋಟಿ ಫಾಲೋವರ್​ಗಳನ್ನು ಪಡೆಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಗೆ ಕಾರಣರಾಗಿದ್ದು ಕಳೆದ ವರ್ಷ ಚಿತ್ರನಟ ರಾಬರ್ಟ್ ಡೌನಿ ಜೂನಿಯರ್ 23 ಗಂಟೆ 22 ನಿಮಿಷದಲ್ಲಿ ಒಂದು ಕೋಟಿ ಹಿಂಬಾಲಕರನ್ನು ಸಂಪಾದಿಸಿ ಗಿನ್ನೆಸ್ ದಾಖಲೆ ನಿರ್ವಿುಸಿದ್ದ ದಾಖಲೆಯನ್ನು ಮುರಿದಿದ್ದಾರೆ.

ಮೇ 12ರಂದು ಇಲ್ಲಿನ ಜಾರ್ಜ್​ಟಾನ್ ವಿಶ್ವವಿದ್ಯಾಲಯದಲ್ಲಿ ನಡೆದ ಕ್ಯಾಥೋಲಿಕ್- ಇವಾಂಜೆಲಿಕಲ್ ನಾಯಕತ್ವ ಶೃಂಗದಲ್ಲಿ ಹೊಸ ಖಾತೆ ತೆರೆಯುವ ಮೂಲಕ ಅವರ ಅಭಿಮಾನಿಗಳನ್ನು ತಲುಪುವ ನಿಟ್ಟಿನಲ್ಲಿ ಟ್ವಿಟ್ಟರ್ ಖಾತೆ ತೆರೆದು ಐದು ಗಂಟೆ ಪೂರ್ಣಗೊಳ್ಳುವ ಮುನ್ನವೇ ಒಂದು ಕೋಟಿಗೂ ಜಾಸ್ತಿ ಹಿಂಬಾಲಕರನ್ನು ಸಂಪಾದಿಸಿ ಜನಪ್ರಿಯ ನಾಯಕರಲ್ಲಿ ತಾವು ಅಗ್ರಗಣ್ಯ ಎಂಬುದನ್ನು ಒಬಾಮಾ ಸಾಬೀತು ಮಾಡಿದ್ದಾರೆ.

Write A Comment