ಮನೋರಂಜನೆ

ಜಸ್ಟಿನ್ ಲ್ಯಾಂಗರ್ ಭಾರತದ ನೂತನ ಕೋಚ್..?

Pinterest LinkedIn Tumblr

Justin-langar

ಮುಂಬೈ, ಮೇ 18: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದು ಆ ಹುದ್ದೆಯನ್ನು ತುಂಬಲು ಆಸ್ಟ್ರೇಲಿಯಾದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

ವಿಶ್ವಕಪ್‌ನ ನಂತರ ಜಿಂಬಾಬ್ವೆಯ ಆಟಗಾರ ಡೆಂಕ್ಲನ್ ಫ್ಲೆಚರ್ ಅವರ ಕೋಚ್ ಅವಧಿ ಮುಗಿದಿದ್ದು ತದ ನಂತರ ಆ ಸ್ಥಾನವನ್ನು ತುಂಬುವವರ ಪಟ್ಟಿಯಲ್ಲಿ ಭಾರತದ ಶ್ರೇಷ್ಠ ಆಟಗಾರರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರ ಹೆಸರುಗಳು ಕೂಡ ಕೇಳಿ ಬಂದಿದ್ದವು. ಆದರೆ ಬಿಸಿಸಿಐ ಗಂಗೂಲಿ ಹಾಗೂ ದ್ರಾವಿಡ್ ಅವರಿಗೆ ನೂತನ ಜವಾಬ್ದಾರಿಯನ್ನು ನೀಡಿದ ನಂತರ ಕೋಚ್ ಹುದ್ದೆಯ ಮತ್ತೆ ಕುತೂಹಲ ಮೂಡಿತು.

ಆದರೆ ಈಗ ಜಸ್ಟಿನ್ ಲ್ಯಾಂಗರ್ ಅವರು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗುವ ಸೂಚನೆ ಸಿಕ್ಕಿದೆ. 44 ರ ಪ್ರಾಯದ ಈ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ 105 ಟೆಸ್ಟ್‌ಗಳಲ್ಲಿ 23 ಶತಕಗಳ ಸಹಿತ 7696 ರನ್‌ಗಳನ್ನು ದಾಖಲಿಸಿದ್ದಾರೆ. ಜಸ್ಟಿನ್ ಲ್ಯಾಂಗರ್ ಅಲ್ಲದೆ ಇಂಗ್ಲೆಂಡ್‌ನ ಹಾಲಿ ಕೋಚ್ ಆಗಿರುವ ಆಂಡಿ ಫ್ಲವರ್‌ರ ಹೆಸರು ಕೂಡ ಕೇಳಿಬರುತ್ತಿವೆ. ಐಪಿಎಲ್‌ನ ಅಂತಿಮ ಪಂದ್ಯವು ಭಾನುವಾರ ನಡೆಯಲಿದ್ದು ತದ ನಂತರ ಬಿಸಿಸಿಐನ ಅಧ್ಯಕ್ಷ ಜಗನ್ಮೋಹನ್ ದಾಲ್ಮಿಯ ಹಾಗೂ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಚರ್ಚಿಸಿದ ನಂತರ ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಯಾರಾಗಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

Write A Comment