ಮನೋರಂಜನೆ

ಹೆಬಿಟೇಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮನಸೂರೆಗೊಂಡ ‘ಹರಿವು’

Pinterest LinkedIn Tumblr

mansore_harivu

ಬೆಂಗಳೂರು: ನವದೆಹಲಿಯ ಹೆಬಿಟೇಟ್ ವರ್ಲ್ಡ್ , ಇಂಡಿಯಾ ಹೆಬಿಟೇಟ್ ಸೆಂಟರ್‌ನಲ್ಲಿ ನಡೆಯುತ್ತಿರುವ 10ನೇ ಹೆಬಿಟೇಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ, ಮಂಸೋರೆ ನಿರ್ದೇಶನದ ‘ಹರಿವು’ ಚಿತ್ರ ಪ್ರದರ್ಶನಗೊಂಡಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮೇ 16ರಂದು ಅಪರಾಹ್ನ 2 ಗಂಟೆಗೆ ಹರಿವು ಸಿನಿಮಾ ಪ್ರದರ್ಶನಗೊಂಡಿತ್ತು. ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಪ್ರಾದೇಶಿಕ ವಿಭಾಗದಲ್ಲಿ ) ವಿಜೇತ ಮಲಯಾಳಂ ಚಿತ್ರ ಅಯಿನ್, ಪೀಕು (ಹಿಂದಿ),  ಬರಗೂರು ರಾಮಚಂದ್ರಪ್ಪ ಅವರ ಮರಣ ದಂಡನೆ, ಬಂಗಾಳಿ ಚಿತ್ರ ಚಟುಷ್ಕೋನೆ, ಮಾರ್ಗರಿಟಾ ವಿತ್ ಎ ಸ್ಟ್ರಾ ಸೇರಿದಂತೆ ಒಟ್ಟು  48 ಚಿತ್ರಗಳು ಈ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿದ್ದವು. ಪ್ರಸ್ತುತ ಚಲನಚಿತ್ರೋತ್ಸವಕ್ಕೆ ಇಂದು ತೆರೆ ಬೀಳಲಿದೆ.

ಉತ್ತಮ ಪ್ರತಿಕ್ರಿಯೆ ಸಿಕ್ಕಿತು: ಮಂಸೋರೆ

ಹೆಬಿಟೇಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿನ ಅನುಭವದ ಬಗ್ಗೆ ನಿರ್ದೇಶಕ ಮಂಸೋರೆ ಹೇಳಿದ್ದು ಹೀಗೆ- ಚಲನಚಿತ್ರೋತ್ಸವದಲ್ಲಿ ‘ಹರಿವು’ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ನಂತರ ಅಯಿನ್ ಚಿತ್ರದ ನಿರ್ದೇಶಕ ಸಿದ್ದಾರ್ಥ್ ಸಿವ ಬಂದು ಫಂಟಾಸ್ಟಿಕ್ ಎಂದು ಹೇಳಿ ಆಲಂಗಿಸಿದರು. ಒಂದಿಬ್ಬರು ಬಂದು ಪೀಕು ಚಿತ್ರದಲ್ಲಿನ ಅಪ್ಪ-ಮಂಗಳ ಸಂಬಂಧಕ್ಕಿಂತ ‘ಹರಿವು’ ಚಿತ್ರದಲ್ಲಿ ಅಪ್ಪ ಮಗನ ಸಂಬಂಧವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದೀರಿ ಎಂದು ಪ್ರಶಂಸಿಸಿದರು.

ನವದೆಹಲಿಯ ಸಿರಿಫೋರ್ಟ್‌ನಲ್ಲಿ ಡಿಐಎಫ್‌ಎಫ್ (ಡೈರೆಕ್ಟರೇಟ್ ಆಫ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್) ನಲ್ಲಿಯೂ ಹರಿವು ಪ್ರದರ್ಶನಗೊಂಡಿತ್ತು. ಅಲ್ಲಿನ ಪ್ರೇಕ್ಷಕರ ಮೇಲೆ ಸಿನಿಮಾ ಗಾಢ ಪ್ರಭಾವ ಬೀರಿದ್ದು, ಸಿನಿಮಾ ನೋಡಿದ ಕೆಲವರು ಮಕ್ಕಳಿಗೆ ಫೋನ್ ಮಾಡಿ, ಮಕ್ಕಳು ಅವರ ಅಪ್ಪಂದಿರಿಗೆ ಫೋನ್ ಮಾಡಿದ್ದರಂತೆ ಎಂದು ಹೇಳುವಾಗ ಸಾರ್ಥಕತೆಯ ಅನುಭವ.

Write A Comment