ಮನೋರಂಜನೆ

3 ವರ್ಷಗಳ ಬಳಿಕ ಮುಂಬೈನಲ್ಲಿ ಪಂದ್ಯ ವೀಕ್ಷಿಸಿದ ಶಾರೂಕ್

Pinterest LinkedIn Tumblr

sharuk

ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕರಾಗಿರುವ ಬಾಲಿವುಡ್ ನಟ ಶಾರೂಕ್ ಖಾನ್ ಬರೋಬ್ಬರಿ ಮೂರು ವರ್ಷಗಳ ಬಳಿಕ ಮುಂಬೈನಲ್ಲಿ ಐಪಿಎಲ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಶನಿವಾರದಂದು ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಶಾರೂಕ್ ಈ ಪಂದ್ಯವನ್ನು ವೀಕ್ಷಿಸಿದರು.

2012 ರಲ್ಲಿ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವೆ ನಡೆದ ಐಪಿಎಲ್ ಪಂದ್ಯದ ವೇಳೆ ಪಾನಮತ್ತರಾಗಿದ್ದ ಶಾರೂಕ್ ಖಾನ್ ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರಲ್ಲದೇ ಅಶ್ಲೀಲ ಶಬ್ದಗಳಿಂದ ಅವರನ್ನು ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಐದು ವರ್ಷಗಳ ಕಾಲ ಶಾರೂಕ್ ವಾಂಖೇಡೆ ಕ್ರೀಡಾಂಗಣವನ್ನು ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು.

ವಾಂಖೇಡೆ ಕ್ರೀಡಾಂಗಣದಲ್ಲಿ ಹಲವು ಪಂದ್ಯಗಳನ್ನು ಏರ್ಪಡಿಸಲಾಗಿದ್ದರೂ ನಿಷೇಧ ಹೇರಲ್ಪಟ್ಟಿದ್ದ ಕಾರಣ ಪಂದ್ಯ ವೀಕ್ಷಣೆಗೆ ಶಾರೂಕ್ ತೆರಳಿರಲಿಲ್ಲ. ಆದರೆ ಶನಿವಾರದಂದು ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಕೋಲ್ಲತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ನಡುವಿನ ಪಂದ್ಯವನ್ನು ಶಾರೂಕ್ ಖಾನ್ ವೀಕ್ಷಿಸಿ ತಮ್ಮ ತಂಡದ ಆಟಗಾರರನ್ನು ಪ್ರೋತ್ಸಾಹಿಸಿದರು. 2012 ರಲ್ಲಿ ಶಾರೂಕ್ ಮಕ್ಕಳ ಮುಂದೆಯೇ ಅಶ್ಲೀಲ ಶಬ್ದ ಪ್ರಯೋಗಿಸಿದ್ದಕ್ಕೆ ಮಕ್ಕಳ ಹಕ್ಕು ರಕ್ಷಣಾ ಆಯೋಗವೂ ಅವರಿಗೆ ನೋಟಿಸ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Write A Comment