ಅಂತರಾಷ್ಟ್ರೀಯ

ಹಣವಿಲ್ಲದ ಯುವತಿ ಟಾಯ್ಲೆಟ್ ನಲ್ಲಿಯೇ ಹಡೆದಳು !

Pinterest LinkedIn Tumblr

1566China--Birth

ಹಣವಿಲ್ಲದ ಯುವತಿಯೊಬ್ಬಳು ಟಾಯ್ಲೆಟ್ ನಲ್ಲಿ ಗಂಡು ಮಗುವೊಂದಕ್ಕೆ ಜನ್ಮ ನೀಡಿ ತನ್ನ ಕೆಲಸ ಮುಂದುವರೆಸಿದ ಘಟನೆ ಚೀನಾದಲ್ಲಿ ನಡೆದಿದೆ.

ಮನೆಯವರ ಜೊತೆಗಿನ ವಿರಸದಿಂದ ಮನೆಬಿಟ್ಟು ಬಂದಿದ್ದ  24ರ ಹರೆಯದ ಕ್ಸಿಯೋ ಲೀ ಶಾನ್, ಡಾಂಗ್ ಪ್ರಾಂತ್ಯದಲ್ಲಿ ಯಾವುದಾದರೂ ಹೋಟೆಲ್ ನಲ್ಲಿ ರೂಂ ಮಾಡಿ ಉಳಿದುಕೊಳ್ಳಲು ನಿರ್ಧರಿಸಿದ್ದಳು. ಆದರೆ ದುರದೃಷ್ಟವಶಾತ್ ಬಸ್ ನಲ್ಲಿ ಬರುತ್ತಿದ್ದ ವೇಳೆ ಆಕೆಯಲ್ಲಿದ್ದ ಹಣವನ್ನು ಪಿಕ್ ಪಾಕೆಟ್ ಮಾಡಿದ್ದರು.

ಹಾಗಾಗಿ ಹಣ ಕಳೆದುಕೊಂಡ ಈಕೆ ಕೇವಲ ಮೂರು ಡಾಲರ್ ಮಾತ್ರ ಹೊಂದಿದ್ದು ಅದನ್ನೇ ತೆಗೆದುಕೊಂಡು  ಇಂಟರ್ನೆಟ್ ಕೆಫೆಗೆ ಹೋಗಿದ್ದಳು. ಈ ಸಮಯದಲ್ಲಿ ಆಕೆಗೆ ಹೊಟ್ಟೆ ನೋವು ಪ್ರಾರಂಭವಾಗಿದ್ದು ತಕ್ಷಣ ಅಲ್ಲಿನ ಟಾಯ್ಲೆಟ್ ಗೆ ಹೋಗಿ  ಮಗುವಿಗೆ ಜನ್ಮ ನೀಡಿ, ಅದೇ ಕೂಡಲೇ ರಕ್ತದಿಂದ ತೊಯ್ದು ಹೋಗಿದ್ದ ಮಗುವನ್ನು ಹಾಗೇ ಎತ್ತಿಕೊಂಡು ಬಂದು ಮತ್ತೆ ಕಂಪ್ಯೂಟರ್ ನಲ್ಲಿ ಕೆಲಸ ಮುಂದುವರಿಸಿದ್ದಳು ಎನ್ನಲಾಗಿದೆ.

ಈ ಘಟನೆಯಿಂದ  ಟಾಯ್ಲೆಟ್ ರಕ್ತದಿಂದ ತುಂಬಿ ಹೋಗಿದ್ದು ಅಲ್ಲಿನ ಸಿಬ್ಬಂದಿಯೊಬ್ಬ ಆಂಬುಲೆನ್ಸ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದ. ತಕ್ಷಣ ಬಂದ ಆಂಬುಲೆನ್ಸ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಆಸ್ಪತ್ರೆಯಲ್ಲಿ ಲೀ ಮಗುವಿನ ಜೊತೆ ಆರೋಗ್ಯವಾಗಿದ್ದಾಳೆ. ಅಲ್ಲದೇ ಆಕೆಯ ಹಿಂದಿನ ಬಾಯ್ ಫ್ರೆಂಡ್ ಮತ್ತು ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿದ್ದು ಮತ್ತೆ ತನ್ನ ಮನೆಗೆ ತೆರಳಲಿದ್ದಾಳೆ ಎಂಬ ಮಾಹಿತಿ ಲಭಿಸಿದೆ.

Write A Comment