ಮನೋರಂಜನೆ

ಒಂಟಿ ಒಂಟಿಯಾಗಿರುವುದು ಬೋರೇ ಬೋರು ಎಂದಿದ್ದ ಈ ನಟಿ ಮಾಡಿದ್ದೇನು…?

Pinterest LinkedIn Tumblr

karanಬಾಲಿವುಡ್ ನಲ್ಲಿ ತನ್ನದೇ ಆದ ಹವಾ ನಿರ್ಮಿಸಿರುವ ಹಾಟ್ ನಟಿ ಬಿಪಾಶಾ ಬಸು ಇದೀಗ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾಳೆ.

ಹೌದು. ಕೆಲದಿನಗಳ ಹಿಂದಷ್ಟೇ ಒಂಟಿ ಒಂಟಿಯಾಗಿರುವುದು ಬೊರೇ ಬೋರು ಎಂದು ಮಾಧ್ಯಮದವರೆದುರು ಅಂತರಂಗದ ನೋವನ್ನು ಬಿಚ್ಚಿಟ್ಟಿದ್ದ ಈ ನಟಿ ಇದೀಗ ಮತ್ತೊಬ್ಬ ಕನಸಿನ ಕುವರನ ಜತೆಗೆ ರೋಮ್ಯಾನ್ಸ್ ಮಾಡಲು ಸಿದ್ದಳಾಗಿದ್ದಾಳೆ. ಡಿನೋ ಮಾರಿಯಾ ಜೊತೆ ಪ್ರೀತಿ ಮಾಡಿದ ಆಕೆ ಆ ಬಳಿಕ ಜಾನ್ ಅಬ್ರಹಾಂ ಜೊತೆ ತನ್ನ ಪ್ರೀತಿಯನ್ನು ಒಟ್ಟಿಗೆ ಒಂದೇ ಮನೆಯಲ್ಲಿದ್ದು ಸುಮಾರು ಎಂಟು ವರ್ಷಗಳ ಕಾಲ ನಡೆಸಿದ್ದ ಈಕೆ ಪ್ರೀತಿ ನಿರಂತರ, ಎಂದು ಆತನ ಜತೆಗೆ ಅಂತರ ಕಾಯ್ದುಕೊಂಡು ಒಂಟಿಯಾಗಿದ್ದಳು.

ಇದೀಗ ಅಲೋನ್ ಚಿತ್ರದ ನಾಯಕ ನಟ ಕರಣ್ ಗ್ರೋವರ್ ಜತೆಗೆ ಕೈ ಕೈ ಹಿಡಿದುಕೊಂಡು ಬಿಪಾಶಾ ಓಡಾಡುತ್ತಿದ್ದು ಈಗಾಗಲೇ ಮದುವೆ ಆಗಿ ತನ್ನ ಹೆಂಡತಿಯನ್ನು ಬಿಟ್ಟಿರುವ ಗ್ರೋವರ್ ಸಹ ಆಕೆಯನ್ನು ಸ್ವಿಜರ್ ಲ್ಯಾಂಡ್ ಗೆ ಕರೆದುಕೊಂಡು ಹೋಗಲು ಸಿದ್ದನಾಗಿದ್ದಾನಂತೆ.

Write A Comment