ಮನೋರಂಜನೆ

ಸನ್ನಿ ಗೆ ಎದುರಾಯ್ತು ಕಂಟಕ !

Pinterest LinkedIn Tumblr

2789sunny

ಬಾಲಿವುಡ್ ನಲ್ಲಿ ತನ್ನ ‘ಪ್ರತಿಭೆ’ಯ ಸಾಕಷ್ಟು ಹೆಸರು ಗಳಿಸಿರುವ ನೀಲಿ ಚಿತ್ರದ ರಾಣಿ ಸನ್ನಿ ಲಿಯೋನ್ ಗೆ ಸಂಕಷ್ಟವೊಂದು ಎದುರಾಗಿದ್ದು ಸದ್ಯದಲ್ಲಿಯೇ ವಿಚಾರಣೆಗಾಗಿ ಸನ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರುವ ಅನಿವಾರ್ಯತೆ ಎದುರಾಗಿದೆ.

ಹೌದು. ಸನ್ನಿ ಲಿಯೋನ್ ಅವರ ವೆಬ್  ಸೈಟ್  ನಲ್ಲಿ  ಅಶ್ಲೀಲ ಚಿತ್ರ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಂಬೈ ಮೂಲದ ಮಹಿಳೆಯೊಬ್ಬರು ಸನ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ ನಟಿ ಸನ್ನಿ ಲಿಯೋನ್ ಅವರ ವೆಬ್ ಸೈಟಿನಲ್ಲಿ ಲೈಂಗಿಕತೆ ಪ್ರಚೋದಿಸುವ ಚಿತ್ರಗಳಿದ್ದು, ಜನರ ಮತ್ತು ಮಕ್ಕಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಈಗಾಗಲೇ ದೂರು ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು, ನಟಿ ಸನ್ನಿ ಲಿಯೋನ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ‘ಅಶ್ಲೀಲ ಚಿತ್ರ ಪ್ರಕಟ’ ಮತ್ತು ಮಹಿಳಾ ಕಾಯ್ದೆಯ ಅಡಿಯಲ್ಲಿ ‘ಅಸಭ್ಯ ಪ್ರಾತಿನಿಧ್ಯತೆ’ ಪ್ರಕರಣದಡಿಯಲ್ಲಿ ತನಿಖೆ ನಡೆಸುತ್ತಿದ್ದು ಸನ್ನಿ ಲಿಯೋನ್ ಅವರನ್ನು ಕರೆಯಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.

Write A Comment