ರಾಷ್ಟ್ರೀಯ

ನರ್ಸ್ ಮೇಲೆ ಕಾಮುಕರ ಗ್ಯಾಂಗ್ ರೇಪ್

Pinterest LinkedIn Tumblr

7603rape1

ಸ್ನೇಹಿತನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ 20 ವರ್ಷದ ಖಾಸಗಿ ಕ್ಲಿನಿಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನರ್ಸ್ ಅನ್ನು ನಾಲ್ವರು ಕಾಮುಕರು ಅಡ್ಡಗಟ್ಟಿ ಅತ್ಯಾಚಾರ ನಡೆಸಿದ ಹೇಯ ಘಟನೆ ಇಂದೋರ್ ನಲ್ಲಿ ನಡೆದಿದೆ.

ರಾತ್ರಿ 9 ಗಂಟೆ ಸುಮಾರಿನಲ್ಲಿ ಸುತ್ತಾಡಲು ಹೋಗಿದ್ದ ಸಂದರ್ಭದಲ್ಲಿ ಸಹಾರಾ ಟೌನ್‌ಶಿಪ್ ಬಳಿ ತಡೆದ ಕುಡಿದ ಮತ್ತಿನಲ್ಲಿದ್ದ 18 ರಿಂದ 20 ವರ್ಷ ವಯಸ್ಸಿನ ಯುವಕರು ಬೈಕ್ ಅನ್ನು ಅಡ್ಡಗಟ್ಟಿ ಆಕೆಯ ಗೆಳೆಯನಲ್ಲಿದ್ದ ಹಣ, ಬೈಕ್ ಮತ್ತು ಮೊಬೈಲ್ ಕಸಿದುಕೊಂಡಿದ್ದಲ್ಲದೇ ಆಕೆಯನ್ನು ನಿರ್ಜನ ಪ್ರದೇಶಕ್ಕೆ  ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಸಮಯದಲ್ಲಿ ಆಕೆಯ ಗೆಳೆಯನನ್ನು ಹಿಡಿದುಕೊಂಡಿದ್ದು ಆತ ಹೇಗೂ ತಪ್ಪಿಸಿಕೊಂಡು ಹತ್ತಿರದ  ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ತಕ್ಷಣ ಅಲ್ಲಿಗೆ ಪೊಲೀಸರು ತೆರಳಿದ್ದು ಅಷ್ಟರಲ್ಲಾಗಲೇ  ತಮ್ಮ ಕಾಮ ತೃಷೆ ತೀರಿಸಿಕೊಂಡಿದ್ದ ಕಾಮುಕರು ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಈಗಾಗಲೇ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಸದ್ಯದಲ್ಲಿಯೇ ಕಾಮುಕರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment