ಮನೋರಂಜನೆ

ಕ್ರೇಜಿಸ್ಟಾರ್ ರವಿ ಚಂದ್ರನ್ ಜೊತೆ ಹೆಜ್ಜೆ ಹಾಕಲು ಬರುತ್ತಿದ್ದಾಳೆ ಮಾದಕ ತಾರೆ ಸನ್ನಿಲಿಯೋನ್

Pinterest LinkedIn Tumblr

sunny

ಬೆಂಗಳೂರು: ಚಿತ್ರೀಕರಣ ಆರಂಭವಾದಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಕುತೂಹಲ ಮೂಡಿಸಿರುವ ಇಂದ್ರಜಿತ್ ಲಂಕೇಶ್‍ರ ಲವ್ ಯೂ ಆಲಿಯಾ ಮತ್ತೆ ಸುದ್ದಿಯಲ್ಲಿದೆ. ಕ್ರೇಜಿಸ್ಟಾರ್ ರವಿ ಚಂದ್ರನ್ ನಟಿಸುತ್ತಿರುವ ಈ ಚಿತ್ರದಲ್ಲಿ ಮಾದಕ ತಾರೆ ಸನ್ನಿಲಿಯೋನ್ ಹೆಜ್ಜೆ ಹಾಕಲು ಬರುತ್ತಿದ್ದಾಳೆ.

ಡಿಕೆ ಚಿತ್ರದಲ್ಲಿ ಜೋಗಿ ಪ್ರೇಮ್ ಜೊತೆ ಹೆಜ್ಜೆಯಾಕಿದ್ದ ಸನ್ನಿ ಲಿಯೋನ್ ಮತ್ತೆ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡಲಿದ್ದಾರೆ. ಬಾಲಿವುಡ್‍ನನಲ್ಲಿ ಮಿಂಚುತ್ತಿರುವ ನೀಲಿಚಿತ್ರಗಳ ರಾಣಿ ಈ ಬಾರಿ ಸ್ಯಾಂಡಲ್‍ವುಡ್‍ನಲ್ಲಿ ಕುಣಿಯುವದರ ಜೊತೆಗೆ ನಟನೆ ಮೂಲಕವೂ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಸನ್ನಿ ಲಿಯೋನ್ ನಟಿಸಿರುವ ಹಿಂದಿಯ “ಏಕ್ ಪೆಹಲಿ ಲೀಲಾ” ಚಿತ್ರ ಸನ್ನಿಗೆ ಹಿರೋಯಿನ್ ಇಮೇಜ್ ತಂದು ಕೊಟ್ಟಿದ್ದಾಗಿದೆ. ಸದ್ಯ ಸನ್ನಿ ಬಾಲಿವುಡ್‍ನಲ್ಲಿ ಬ್ಯೂಸಿಯಾಗಿದ್ದರೂ, ಇಂದ್ರಜಿತ್ ಲಂಕೇಶ್ ನಿರ್ದೇಶನದ ಲವ್ ಯೂ ಆಲಿಯಾ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಓಕೆ ಎಂದಿದ್ದಾಳೆ.

ಸನ್ನಿ ಲಿಯೋನ್ ಲವ್ ಯೂ ಆಲಿಯಾ ಚಿತ್ರದಲ್ಲಿ ಐಟಂ ಡ್ಯಾನ್ಸರ್ ಮಾತ್ರವಲ್ಲದೇ, ಈ ಚಿತ್ರದಲ್ಲಿ ಆಕೆಗೆ ಒಂದು ಪಾತ್ರವಿದೆ. ಈಗಾಗಲೇ ಸನ್ನಿ ಜೊತೆಗೆ ಮಾತುಕತೆ ಮುಗಿದಿದ್ದು, ಕಾಸ್ಟ್ಯೂಮ್ ಡಿಸೈನ್ ಸಹ ಮುಗಿದಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.

Write A Comment