ಮನೋರಂಜನೆ

ಶಾರುಖ್ ಖಾನ್‌‌ಗೆ ಜಾರಿ ನಿರ್ದೇಶನಾಲಯ ಸಮನ್ಸ್

Pinterest LinkedIn Tumblr

Sharukh-Dipika

ಕೋಲ್ಕತಾ: ಕೆಕೆಆರ್ ಶೇರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರಿಂದ ದೇಶದ ಬೊಕ್ಕಸಕ್ಕೆ 72 ಕೋಟಿ ನಷ್ಟವುಂಟಾಗಿರುವ ಹಿನ್ನೆಲೆಯಲ್ಲಿ ಬಾಲಿವುಡ್  ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
.
ಜಾರಿ ನಿರ್ದೇಶನಾಲಯದ ಪರ ಚೋಕ್ಸಿ & ಚೋಕ್ಸಿ ನಡೆಸಿದ ಲೆಕ್ಕತಪಾಸಣೆಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಜಯ ಮೆಹ್ತಾ ಕಂಪನಿಗಳ ನಡುವೆ ಷೇರು ವರ್ಗಾವಣೆ ಕಡಿಮೆ ಮೌಲ್ಯದಿಂದ ಕೂಡಿತ್ತು ಎನ್ನುವುದನ್ನು ಪತ್ತೆಹಚ್ಚಲಾಗಿದೆ. ನೈಟ್ ರೈಡರ್ಸ್ ಷೇರುಗಳನ್ನು ಜಯ ಮೆಹ್ತಾ ಮಾಲೀಕತ್ವದ ಸೀ ಐಲೆಂಡ್ ಕಂಪನಿಗೆ ಹಸ್ತಾಂತರಿಸಿದಾಗ ಷೇರು ಮೌಲ್ಯವು 70ರಿಂದ 86 ರೂ. ಇರಬೇಕಿತ್ತು.

ಆದರೆ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ ರೂ. 10ರಂತೆ ನೀಡಲಾಗಿದೆ. ಇದರಿಂದ ಸೀ ಐಲೆಂಡ್ ಕಂಪನಿಗೆ ವರ್ಗಾವಣೆ ಮಾಡಿದ ಷೇರುಗಳನ್ನು 8ರಿಂದ 9 ಪಟ್ಟು ಕಡಿಮೆ ಮೌಲ್ಯಮಾಪನ ಮಾಡಲಾಗಿದೆ ಎಂದು ತಪಾಸಣೆ ವರದಿ ಪ್ರಸ್ತಾಪಿಸಿದೆ.

ಇದೇ ರೀತಿ ನೈಟ್ ರೈಡರ್ಸ್‌ ಷೇರುಗಳನ್ನು ಜೂಹಿ ಚಾವ್ಲಾ ಮೆಹ್ತಾ ಅವರಿಂದ  ಸೀ ಐಲೆಂಡ್ ಕಂಪನಿ ವರ್ಗಾವಣೆಗೆ ಈಕ್ವಿಟ್ ಷೇರುಗಳ ನ್ಯಾಯವಾದ ಮೌಲ್ಯ 83ರಿಂದ 99ರೂ.ಗಳಾಗಿವೆ. ಆದರೆ ಕೇವಲ ಪ್ರತಿ ಷೇರಿಗೆ 10ರೂ. ನಂತೆ ವರ್ಗಾವಣೆ ಮಾಡಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಪ್ರಕಾರ, ಭಾರತದ ಹೊರಗೆ ವಾಸವಿರುವ ವ್ಯಕ್ತಿಗಳಿಗೆ ವರ್ಗಾವಣೆ ಮಾಡುವ ಷೇರುಗಳ ಮೌಲ್ಯವು ಸೆಬಿ ಮಾರ್ಗದರ್ಶಕಗಳ ಅನ್ವಯ ನಿಗದಿ ಮಾಡಿದ ದರಕ್ಕಿಂತ ಕಡಿಮೆ ಇರಬಾರದು.

Write A Comment