ಮನೋರಂಜನೆ

ಮಲ್ಲಿಕಾ ಶೆರಾವತ್ ಗೆ ಉರುಳಾಯ್ತಾ ಡರ್ಟಿ ಪಾಲಿಟಿಕ್ಸ್ ..?

Pinterest LinkedIn Tumblr

988730052014Dirty-Politics

ಬಾಲಿವುಡ್ ನ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ ಗೆ ಸಂಕಷ್ಟವೊಂದು ಎದುರಾಗಿದ್ದು ಡರ್ಟಿ ಪಾಲಿಟಿಕ್ಸ್ ಸಿನಿಮಾದಲ್ಲಿ ತಮ್ಮ ಪಾತ್ರದ  ಮೂಲಕ ಜನಮನ್ನಣೆ ಗಳಿಸಲು ಮುಂದಾಗಿದ್ದ ಈ ನಟಿಗೆ ಶಿಕ್ಷೆ ಎದುರಾಗುವ ಸಾಧ್ಯತೆಯೂ ಇದೆ.

ಡರ್ಟಿ ಪಾಲಿಟಿಕ್ಸ್ ಚಿತ್ರದಲ್ಲಿ ರಾಷ್ಟ್ರ ಧ್ವಜವನ್ನು ಸುತ್ತಿಕೊಂಡುಅವಮಾನ ಮಾಡಿದ್ದಾರೆ ಎಂದು ವಕೀಲ 1971 ರ  ಅಡಿಯಲ್ಲಿ ದೂರು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನಟಿ ಮಲ್ಲಿಕಾ ಶೆರಾವತ್,ಅಶುತೋಷ್ ರಾಣಾ , ಓಂ ಪುರಿ, ಲಲಿತ್ ಮೋದಿ, ಹಾಗೂ ನಿರ್ದೇಶಕ ಕೆ ಸಿ . ಬೋಕಾಡಿಯಾ ಅವರಿಗೆ ನೋಟೀಸ್ ಜಾರಿ ಮಾಡಿ ಉತ್ತರ ನೀಡುವಂತೆ ಖಡಕ್ ಸೂಚನೆ ನೀಡಿದೆ.

ಒಂದೊಮ್ಮೆ ನ್ಯಾಯಾಲಯಕ್ಕೆ ಉತ್ತರ ನೀಡದಿದ್ದರೆ ಅಥವಾ ವಿಳಂಬ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ  ಒಳಪಡಿಸುವ ಸಾಧ್ಯತೆಯೂ ಇದ್ದು  ಹಾಗಾಗಿ ಈ ಐವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬ ಬಗೆಗೆ ಕುತೂಹಲ ಮೂಡಿದೆ.

Write A Comment